Saturday, April 18, 2026
Homeದೇಶಸಂಸದ ಸ್ಥಾನ ಕಿತ್ತುಕೊಳ್ಳಬಹುದು ಹೊರತು ನನ್ನನ್ನು ತಡೆಯಲು ಅಸಾಧ್ಯ: ವಯನಾಡ್ ನಲ್ಲಿ ರಾಹುಲ್

ಸಂಸದ ಸ್ಥಾನ ಕಿತ್ತುಕೊಳ್ಳಬಹುದು ಹೊರತು ನನ್ನನ್ನು ತಡೆಯಲು ಅಸಾಧ್ಯ: ವಯನಾಡ್ ನಲ್ಲಿ ರಾಹುಲ್

ವಯನಾಡ್: ಸಂಸದ ಎನ್ನುವುದು ಬರೀ ಟ್ಯಾಗ್ ಆಗಿದ್ದು, ಬಿಜೆಪಿ ನನ್ನಿಂದ ಅದನ್ನು ಕಿತ್ತೊಗೆಯಬಹುದು. ಆದರೆ ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ

ಮಾನನಷ್ಟ ಪ್ರಕರಣದಲ್ಲಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ಮೊದಲ ಬಾರಿಗೆ ವಯನಾಡ್ ಗೆ ಹೋಗಿರುವ ಅವರು ಈ ಬಗ್ಗೆ ಮಾತನಾಡಿದ್ದಾರೆ.

“ಸಂಸದರೆಂದರೆ ಕೇವಲ ಟ್ಯಾಗ್. ಅದೊಂದು ಸ್ಥಾನ, ಅದೊಂದು ಹುದ್ದೆ. ಬಿಜೆಪಿಯವರು ಟ್ಯಾಗ್, ಸ್ಥಾನ, ಮನೆಯನ್ನು ಕಸಿದುಕೊಳ್ಳಬಹುದು ಅಥವಾ ನನ್ನನ್ನು ಜೈಲಿಗೆ ಹಾಕಬಹುದು. ಆದರೆ ವಯನಾಡ್ ಜನರನ್ನು ಪ್ರತಿನಿಧಿಸುವುದನ್ನು ತಡೆಯಲು ಅವರು ಸಾಧ್ಯವಿಲ್ಲ” ಎಂದವರು ಹೇಳಿದರು.

“ಪೊಲೀಸರನ್ನು ನನ್ನ ಮನೆಗೆ ಕಳುಹಿಸುವ ಮೂಲಕ ನನ್ನನ್ನು ಹೆದರಿಸಬಹುದು ಎಂದು ಅವರು ಭಾವಿಸುತ್ತಾರೆ. ಅವರು ಮನೆಯನ್ನು ವಾಪಸ್ ಪಡೆದುಕೊಂಡಿದ್ದೂ ಸಂತೋಷವಾಗಿದೆ, ಯಾಕಂದರೆ ಆ ಮನೆಯಲ್ಲಿ ವಾಸಿಸುವ ಬಗ್ಗೆ ನನಗೆ ತೃಪ್ತಿ ಇರಲ್ಲ … ” ಎಂದು ಸರಕಾರಿ ಬಂಗಲೆ ತೆರವುಗೊಳಿಸಿದ ಬಗ್ಗೆ ಸರಕಾರವನ್ನು ಟೀಕಿಸಿದರು.

ಹೆಚ್ಚಿನ ಸುದ್ದಿ