Saturday, June 6, 2026
Homeಚುನಾವಣೆ 2023ದೋಸೆ ಕಾವಲಿ ಮೇಲೆ ಮೂಡಿದ ಮತದಾನ ಜಾಗೃತಿ

ದೋಸೆ ಕಾವಲಿ ಮೇಲೆ ಮೂಡಿದ ಮತದಾನ ಜಾಗೃತಿ

ದಾವಣಗೆರೆ: ಈಗಾಗಲೇ ರಾಜ್ಯದ ವಿಧಾನಸಭಾ ಸಾರ್ವತ್ರಿಕ ಚುನಾವಣೆ ದಿನಾಂಕ ಮೇ 10 ರಂದು ಘೋಷಣೆ ಆಗಿದೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಚುನಾವಣಾ ಆಯೋಗ ಮತದಾರರ ಬಳಿ ಹೋಗಿ, ಮತದಾನದ ಅರಿವು ಕಾರ್ಯಕ್ರಮಗಳನ್ನ ಮಾಡುತ್ತಿದ್ದಾರೆ. ಆದ್ರೆ ಇದೀಗ ಚುನಾವಣಾ ಅಧಿಕಾರಿಗಳು ವಿನೂತನವಾಗಿ ಮತದಾನದ ಅರಿವು ಕಾರ್ಯವನ್ನ ಮಾಡಿದ್ದಾರೆ.

ಬೆಣ್ಣೆ ದೋಸೆಗೆ ಹೆಸರುವಾಸಿಯಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಮತದಾರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಸುರೇಶ್ ಹಿಟ್ನಾಳ್ ಮತ್ತು ಸಿಬ್ಬಂದಿ ದೋಸೆ ಹಂಚಿನ ಮೇಲೆ “ಮೇ 10 ಮತದಾನ” ಎಂಬ ಸಂದೇಶ ಬರೆಯುವ ಮೂಲಕ ವಿನೂತನ ರೀತಿಯಲ್ಲಿ ಮತದಾನ ಜಾಗೃತಿಯನ್ನ ಮೂಡಿಸಿದ್ದಾರೆ.

ಈ ಮತದಾನ ಜಾಗೃತಿಗೆ ಮತದಾರ ಪ್ರಭುಗಳು ಫಿದಾ ಆಗಿದ್ದು, ವಿನೂತನ ರೀತಿಯಲ್ಲಿ ಮತದಾನದ ಅರಿವನ್ನು ಮೂಡಿಸುವ ಕಾರ್ಯ ಮಾಡಿದ್ದೀರಿ. ಈ ಬಾರೀ ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯಲ್ಲಿ ದಾಖಲೆಯ ಮತದಾನ ಆಗುವುದು ಖಂಡಿತ ಎಂದು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸುದ್ದಿ