ಚಿಕ್ಕಮಗಳೂರು : ಕಡೂರಿನಿಂದ ಸ್ಪರ್ಧಿಸಲು ನನಗೆ ಎಚ್.ಡಿ.ಕುಮಾರಸ್ವಾಮಿ ಹಣ ಕೊಟ್ಟಿದ್ದಾರೆ ಎಂದು ವೈಎಸ್‌ವಿ ದತ್ತ ನುಡಿದಿದ್ದಾರೆ. ಕಡೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ವೈಎಸ್‌ವಿ ದತ್ತ ಮಂಗಳವಾರ ನಾಮಪತ್ರ ಸಲ್ಲಿಸಿ ಮಾತನಾಡಿದರು.
ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಎರಡು ತಿಂಗಳ ಹಿಂದಷ್ಟೇ ಸೇರಿದ್ದ ಪಕ್ಷವನ್ನು ತೊರೆದು ಕಳೆದ ವಾರ ಜೆಡಿಎಸ್ ಪಕ್ಷಕ್ಕೆ ಮರು ಸೇರ್ಪಡೆಗೊಂಡಿದ್ದ ವೈಎಸ್‌ವಿ ದತ್ತಾ ಅವರಿಗೆ ಕಡೂರಿನಿಂದ ಬಿಫಾರ್ಮ್ ನೀಡಲಾಗಿತ್ತು.
ದೇವೇಗೌಡರ ಮಾನಸಪುತ್ರ ಎಂದೇ ಹೆಸರಾದ ವೈಎಸ್‌ವಿ ದತ್ತ ಅವರ ನಾಮಪತ್ರ ಸಲ್ಲಿಕೆಗೆ ಸ್ವತಃ ದೇವೇಗೌಡರೇ ಆಗಮಿಸಿದ್ದು ವಿಶೇಷವಾಗಿತ್ತು. ನಾಮಪತ್ರ ಸಲ್ಲಿಸುವ ವೇಳೆ ಎಚ್.ಡಿ.ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ದತ್ತ ಅವರಿಗೆ ಸಾಥ್ ನೀಡಿದರು.