ಬೆಂಗಳೂರು 26(ಮುದ್ದೇಬಿಹಾಳ):
ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಪ್ಪಾಜಿ ನಾಡಗೌಡ ಅವರು ಸುಮಾರು ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದು, ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದ ಅಜಾತಶತ್ರು ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಹೈಕಮಾಂಡ್ನ ಎಲ್ಲ ನಿರ್ಧಾರಗಳನ್ನು ಗೌರವಿಸುತ್ತಾ ಶಿಸ್ತಿನ ಸಿಪಾಯಿಯಾಗಿ ಕಾರ್ಯನಿರ್ವಹಿಸಿರುವ ಅವರ ಸೇವೆಯನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಅಭಿಪ್ರಾಯ ಒತ್ತಾಯಿಸಲಾಗಿದೆ.
ಶುಕ್ರವಾರ ಸುಮಾರು 600ಕ್ಕೂ ಹೆಚ್ಚು ಜನರ ನಿಯೋಗವು ಬೆಂಗಳೂರಿನ ಕೆಪಿಸಿಸಿ ಕಾರ್ಯಾಲಯಕ್ಕೆ ತೆರಳಿ ಪಕ್ಷದ ರಾಜ್ಯಾಧ್ಯಕ್ಷರಿಗೆ ಒತ್ತಾಯಿಸಿದ ನಿಯೋಗವು, ಜನತಾದಳ ಪಕ್ಷದ ಭದ್ರಕೋಟಿಯಾಗಿದ್ದ ಮುದ್ದೇಬಿಹಾಳ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಭದ್ರಕೋಟೆಯನ್ನಾಗಿ ಪರಿವರ್ತಿಸುವಲ್ಲಿ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಅವರ ಪಾತ್ರ ಮಹತ್ವದ್ದಾಗಿದೆ ಎಂದು ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಗ್ಯಾರೆಂಟಿ ಯೋಜನೆ ಸಮೀತಿ ತಾಲೂಕಾಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ಮತ್ತು ಅನುಭವಿ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಅಪ್ಪಾಜಿ ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಅವರ ಸುದೀರ್ಘ ಸೇವೆಗೆ ನ್ಯಾಯ ಒದಗಿಸಬೇಕು. ಅಪ್ಪಾಜಿ ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡಿದರೆ ಮುದ್ದೇಬಿಹಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿದ್ದು, ಕ್ಷೇತ್ರವು ಮುಂದೆಯೂ ಪಕ್ಷದ ಭದ್ರಕೋಟೆಯಾಗಿ ಉಳಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ನಾಡಗೌಡ ಅವರಿಗೆ ಸಚಿವ ಸ್ಥಾನ ನ್ಯಾಯಯುತವಾಗಿದೆ: ಕೆಪಿಸಿಸಿ ರಾಜ್ಯಾಧ್ಯಕ್ಷ ಹರಿಪ್ರಸಾದ
ಮುದ್ದೇಬಿಹಾಳ ಕ್ಷೇತ್ರದಿಂದ ನಿಯೋಗದೊಂದಿಗೆ ತೆರಲಿದ್ದ ನೂರಾರು ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಸ್ವಾಗತಿಸಿದ ನೂತನ ಕೆಪಿಸಿಸಿ ರಾಜ್ಯಾಧ್ಯಕ್ಷ ಬಿ.ಕೆ.ಹರಿಪ್ರಸಾದ, ವಿಜಯಪುರ ಜಿಲ್ಲೆಯಲ್ಲಿ ಬಹುತೇಕ ಎಲ್ಲರೂ ಹಿರಿಯ ರಾಜಕಾರಣಿಗಳೇ ಇದ್ದಾರೆ. ಕಿರಿಯ ರಾಜಕಾರಣಿ ಎಂದರೆ ನಾನೊಬ್ಬನೇ. ಆದರೆ ಸುಮಾರು 45 ವರ್ಷಗಳಿಂದ ಅಪ್ಪಾಜಿ ಸಿ.ಎಸ್. ನಾಡಗೌಡ ಅವರನ್ನು ಯುವ ಕಾಂಗ್ರೆಸ್ ದಿನಗಳಿಂದಲೂ ನಾನು ಹತ್ತಿರದಿಂದ ಬಲ್ಲೆ.
ಪಕ್ಷದ ಸಂಘಟನೆಗಾಗಿ ಅವರು ಸಲ್ಲಿಸಿರುವ ಸೇವೆ, ಪಕ್ಷದ ಮೇಲಿನ ಅಚಲ ನಿಷ್ಠೆ ಹಾಗೂ ಜನಪರ ಕಾರ್ಯವೈಖರಿಯನ್ನು ನಾನು ಸ್ವತಃ ಕಂಡಿದ್ದೇನೆ. ಇಷ್ಟೊಂದು ಸುದೀರ್ಘ ರಾಜಕೀಯ ಅನುಭವ ಮತ್ತು ಪಕ್ಷಕ್ಕಾಗಿ ದುಡಿದಿರುವ ಅವರ ಸೇವೆಯನ್ನು ಪರಿಗಣಿಸಿದರೆ, ಅವರಿಗೆ ಸಚಿವ ಸ್ಥಾನ ನೀಡುವುದು ನ್ಯಾಯಯುತವಾಗಿದೆ.
ಅಪ್ಪಾಜಿ ನಾಡಗೌಡ ಅವರಂತಹ ಅನುಭವಿ ಮತ್ತು ಪಕ್ಷನಿಷ್ಠ ನಾಯಕನಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವುದರಿಂದ ಪಕ್ಷಕ್ಕೂ ಸರ್ಕಾರಕ್ಕೂ ಮತ್ತಷ್ಟು ಬಲ ಸಿಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ ಅವರು ನಿಮ್ಮ ಬೇಡಿಕೆಯನ್ನು ಪಕ್ಷದ ರಾಷ್ಟಿçÃಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ನಾಯಕ ರಾಹುಲ ಗಾಂಧಿಯವರಿಗೆ ಮನವರಿಕೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಮುದ್ದೇಬಿಹಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಅಕ್ಷತಾಚಲವಾದಿ, ಮಾಬುಬಿ ಬಾಗವಾನ, ನೀಲಮ್ಮ ಚಲವಾದಿ, ಪ್ರೀತಿ ದೇಗಿನಾಳ, ಎಸ್.ಸಿ. ಘಟಕದ ತಾಲೂಕಾಧ್ಯಕ್ಷ ಶ್ರೀಕಾಂತ ಚಲವಾದಿ, ಹಣಮಂತ ಕುರಿ, ತಿಪ್ಪಣ್ಣ ದೊಡಮನಿ, ಸಂತೋಷ ಚವ್ಹಾಣ, ಸಿ.ಜಿ.ವಿಜಯಕರ, ಕಾಶೀಮ ಪಟೇಲ, ಹರಿಶ ಬೇವೂರ, ಸಿಕಂದರ್ ಜಾನ್ವೇಕರ್, ಸಂಗನಗೌಡ ಬಿರಾದಾರ, ಬಿ.ಕೆ.ಬಿರಾದಾರ, ಎ.ಗಣೇಶ ಅನ್ನಿಗೌನಿ, ಎಂ.ಎನ್.ಮದರಿ, ಶಶಿಕಾಂತ ಮಾಲಗತ್ತಿ, ಎಂ.ಎಚ್.ಹಾಲಣ್ಣವರ, ಬಿ.ಎ.ನಾಡಗೌಡ, ಸಿದ್ದಗೌಡ ಪಾಟೀಲ, ಬಸವರಾಜ ಕಟ್ಟಿಮನಿ, ಸಿ.ಪಿ.ಸಜ್ಜನ, ದಾನಪ್ಪ ನಾಗಠಾಣ, ರಾಯನಗೌಡ ತಾತರೆಡ್ಡಿ, ಬಸನಗೌಡ ಪಾಟೀಲ, ಯಂಕಪ್ಪ ಚಲವಾದಿ, ಪೀರಸಾಬ ಮಕಾಂದಾರ, ಮೆಹಬೂಬ ಬಾಗವಾನ, ಬಾಪುರಾಯ ದೇಸಾಯಿ(ಹಡಗಲಿ), ಸುರೇಶಗೌಡ ಪಾಟೀಲ, ಶ್ರೀಶೈಲ ಮರೊಳ, ರಾಜು ಕೊಂಗಡಿ, ಮಲಿಕಸಾಬ ನದಾಫ್, ಅಶೋಕ ಪಾದಗಟ್ಟಿ, ರಾಮು ಲಮಾಣಿ, ಕಾಮರಾಜ ಬಿರಾದಾರ, ಶಿವು ಶಿವೊಪುರ, ರಮೇಶ ಓಸ್ವಾಲ್, ಮೆಹಬೂಬ ಗೊಳಸಂಗಿ, ಪ್ರಶಾಂತ ಕಾಳೆ, ಪ್ರಭುರಾಜ ಕಲಬುರ್ಗಿ, ಜಬ್ಬಾರ ಗೋಲಂದಾಜ, ಮಹಾದೇವಿ ಚಲವಾದಿ, ಕಸ್ತೂರಿಬಾಯಿ ಪೀರಾಪೂರ, ಲಲಿತಾ ಇಲಕಲ್ಲ, ನೀರ್ಮಲಾ ಬಜಂತ್ರಿ ಇದ್ದರು.
