ಮುದ್ದೇಬಿಹಾಳ:
ಪಧ್ಮಶ್ರೀ ಪುರಸ್ಕೃತರಾದ ಮಂಡ್ಯ ಜಿಲ್ಲೆಯಲ್ಲಿ ಪುಸ್ತಕ ಮನೆಯನ್ನು ಸಂಸ್ಥಾಪಿಸಿದ ಎಂ.ಅಂಕೇಗೌಡ ಅವರು ಸಂಗ್ರಹಿಸಿದ 20ಲಕ್ಷಕ್ಕೂ ಅಧಿಕ ಪುಸ್ತಕಗಳ ಸಂರಕ್ಷಣೆಗಾಗಿ ಹಾಗೂ ಯುವ ಪೀಳಿಗೆಗಳಿಗೆ ಅನುಕೂಲಕ್ಕಾಗಿ ಸೂಕ್ತ ಜಗವನ್ನು ಗುರುತಿಸಿ ಸುಸಜ್ಜಿತ ಕಟ್ಟಡವನ್ನು ಕಟ್ಟಿಸುವ ಐತಿಹಾಸಿಕ ನಿರ್ಣಯವನ್ನು ಸಿಎಂ ಡಿ.ಕೆ.ಶಿವಕುಮಾರ ಬುಧವಾರ ತೆಗೆದುಕೊಂಡಿದ್ದಾರೆ.

ಈ ಕುರಿತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿತುಷಾರ ಗಿರಿನಾಥ ಅವರಿಗೆ ಸೂಚನೆ ನೀಡಿರುವ ಸಿಎಂ ಅವರು, ಎಂ.ಅಂಕೇಗೌಡ ಅವರು ಸಾಕಷ್ಟು ಪ್ರಮಾಣದಲ್ಲಿ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳನ್ನು ಓದು ಪ್ರೀಯರಿಗೆ ತಲುಪಿಸುವ ಪ್ರಯತ್ನ ಓದುಗರ ಹಸಿವು ನಿಗಿಸುವಂತಾಗಿದೆ. ಈಗಾಗಲೇ ಇವರ ಸಾಧನೆಗೆ ಸರಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದ್ದು ಇವರು ಸಂಗ್ರಹಿ ಇಟ್ಟಿರುವ ಪುಸ್ತಕಗಳ ಸಂರಕ್ಷಣೆಯು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೂಡಲೇ ಇದಕ್ಕೆ ಕರ್ನಾಟಕ ರಾಜ್ಯದಲ್ಲಿ ಸೂಕ್ತ ಸ್ಥಳವನ್ನು ಗುರುತಿಸಿ ಪುಸ್ತಕ ಸಂಗ್ರಹವನ್ನು ಮುಂದಿನ ಪೀಳಿಗಿಗೂ ತಲುಪಿಸುವಂತೆ ಮಾಡುವುದು ಅವಶ್ಯಕವಿದೆ ಎಂದು ಅವರು ಹೇಳಿದ್ದಾರೆ.
