Sunday, July 5, 2026
Homeಜಿಲ್ಲಾ ಸುದ್ದಿಗಳು₹340.53 ಲಕ್ಷ ಲಾಭ ಗಳಿಸಿದ ದಿ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್: ಅಧ್ಯಕ್ಷ ಪ್ರಭುದೇವ ಕಲಬುರ್ಗಿ

₹340.53 ಲಕ್ಷ ಲಾಭ ಗಳಿಸಿದ ದಿ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್: ಅಧ್ಯಕ್ಷ ಪ್ರಭುದೇವ ಕಲಬುರ್ಗಿ

ಮುದ್ದೇಬಿಹಾಳ: ದಿ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ₹340.53 ಲಕ್ಷಗಳ ಒಟ್ಟು ಲಾಭ ಗಳಿಸಿದ್ದು, ಅದರಲ್ಲಿ ₹141.81 ಲಕ್ಷವನ್ನು ಕರಡು ಸಾಲ ನಿಧಿಗೆ, ₹96.20 ಲಕ್ಷವನ್ನು ಆದಾಯ ತೆರಿಗೆ ಪಾವತಿಗೆ ಮೀಸಲಿರಿಸಲಾಗಿದೆ. ಇದಾದ ಬಳಿಕ ₹102.52 ಲಕ್ಷ ನಿವ್ವಳ ಲಾಭ ದಾಖಲಿಸಿದ್ದು, ಬ್ಯಾಂಕ್‌ನ ಒಟ್ಟು ಆದಾಯ ₹1,915.20 ಲಕ್ಷ ತಲುಪಿದೆ ಎಂದು ಬ್ಯಾಂಕ್ ಅಧ್ಯಕ್ಷ ಪ್ರಭುದೇವ ಕಲಬುರ್ಗಿ ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ದಿ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಸಭಾಭವನದಲ್ಲಿ ಶನಿವಾರ ನಡೆದ ಬ್ಯಾಂಕಿನ 67ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕ್ ತನ್ನ ಗ್ರಾಹಕರಿಗೆ ಗೋಲ್ಡ್ ಓವರ್‌ಡ್ರಾಫ್ಟ್ ಸಾಲ ಸೌಲಭ್ಯವನ್ನು ಪರಿಚಯಿಸಿದ್ದು, ಈ ಮೂಲಕ ಇತರೆ ಬ್ಯಾಂಕುಗಳಿಗೆ ಪೈಪೋಟಿ ನೀಡುವ ರೀತಿಯ ಸೇವೆಯನ್ನು ಒದಗಿಸುತ್ತಿದೆ ಎಂದು ಹೇಳಿದರು.
ಇದರ ಜೊತೆಗೆ, ಬ್ಯಾಂಕಿನ 8,064 ಸದಸ್ಯರಿಗೆ ಅಪಘಾತ ವಿಮೆ ಸೌಲಭ್ಯವನ್ನು ಬ್ಯಾಂಕ್‌ನಿಂದಲೇ ಪ್ರೀಮಿಯಂ ಪಾವತಿಸಿ ಕಲ್ಪಿಸಲಾಗುತ್ತಿದೆ. ಈ ಯೋಜನೆಯಡಿ ಅಪಘಾತದಿಂದ ಭಾಗಶಃ ಅಂಗವೈಕಲ್ಯ ಉಂಟಾದರೆ ₹1 ಲಕ್ಷದವರೆಗೆ ಹಾಗೂ ಅಪಘಾತದಲ್ಲಿ ಮೃತಪಟ್ಟರೆ ವಾರಸುದಾರರಿಗೆ ₹2 ಲಕ್ಷದವರೆಗೆ ಪರಿಹಾರ ದೊರೆಯಲಿದೆ. ಈ ನೂತನ ಯೋಜನೆಯನ್ನು ಪ್ರಸಕ್ತ ಹಣಕಾಸು ವರ್ಷದಿಂದಲೇ ಜಾರಿಗೆ ತರಲಾಗುತ್ತಿದೆ ಎಂದು ಅವರು ತಿಳಿಸಿದರು.
ಬ್ಯಾಂಕ್ ಸದಸ್ಯರಿಗೆ ಇನ್ನಷ್ಟು ಪರಿಣಾಮಕಾರಿ ಹಾಗೂ ಸ್ಪರ್ಧಾತ್ಮಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅಧ್ಯಕ್ಷರು ಹೇಳಿದರು.
ಕೋ-ಆಪರೇಟಿವ್ ಬ್ಯಾಂಕ್‌ನಿಂದ ಡಿಜಿಟಲ್ ಸೇವೆಗಳ ವಿಸ್ತರಣೆ:
ದಿ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಸ್ಥಳೀಯ ಮಟ್ಟದಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರ ವಿಶ್ವಾಸ ಗಳಿಸಿಕೊಂಡಿದ್ದು, ಗ್ರಾಹಕರಿಗೆ ಮತ್ತಷ್ಟು ತ್ವರಿತ ಹಾಗೂ ಗುಣಮಟ್ಟದ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಡಿಜಿಟಲ್ ಸೇವೆಗಳನ್ನು ವಿಸ್ತರಿಸಲು ಮುಂದಾಗಿದೆ.
ಬ್ಯಾಂಕ್ ಗ್ರಾಹಕರು ತಮ್ಮ ಖಾತೆಯ ಸ್ಟೇಟ್‌ಮೆಂಟ್ ಅನ್ನು ಇನ್ನು ಮುಂದೆ ಬ್ಯಾಂಕಿಗೆ ಭೇಟಿ ನೀಡದೆ, ಬ್ಯಾಂಕ್‌ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 99005 11877 ಸಂಖ್ಯೆಗೆ ವಾಟ್ಸ್‌ಆಪ್ ಮೂಲಕ ವಿನಂತಿ ಸಲ್ಲಿಸಿ ಪಡೆಯಬಹುದಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಇದರೊಂದಿಗೆ, ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಇನ್ನಷ್ಟು ವೇಗದ ಹಾಗೂ ಸುರಕ್ಷಿತ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಡಿಜಿಟಲ್ ಪಾವತಿ ಸೇವೆಯನ್ನೂ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬ್ಯಾಂಕಿನ 67ನೇ ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಮಂಡಳಿ ತಿಳಿಸಿತು.
ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಗ್ರಾಹಕ ಸ್ನೇಹಿ ಸೇವೆಗಳನ್ನು ವಿಸ್ತರಿಸಿ, ಗ್ರಾಮೀಣ ಭಾಗದ ಜನರಿಗೂ ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ತಲುಪಿಸುವುದು ಬ್ಯಾಂಕಿನ ಪ್ರಮುಖ ಉದ್ದೇಶವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿದರಕುಂದಿ ಮಾತನಾಡಿ, 2026-27ನೇ ಸಾಲಿನ ಬಜೆಟ್ಟಿಗೆ ಅನುಮೋದನೆ ಮತ್ತು ಬಜೆಟ್ಟಿಗಿಂತ ಹೆಚ್ಚಿಗಾದ ಖರ್ಚುಗಳನ್ನು ಪರಿಶೀಲಿಸಿ ಮಂಜೂರು ನೀಡಿದರು.
ಬ್ಯಾಂಕಿನ ವೃತ್ತಿಪರ ನಿರ್ದೇಶಕ ರವಿ ಗೂಳಿ ಅವರು ವಾಷಿಕ ವರದಿಯನ್ನು ಮಂಡಿಸಿದರು. ಬ್ಯಾಂಕಿನ ನಿರ್ದೇಶಕ ಚಂದ್ರಶೇಖರ ಸಜ್ಜನ 2026-27ನೇ ಸಾಲಿನ ುಮಂಬರುವ ಆಡಳಿತ ಮಂಡಳಿಯ ಕಾರ್ಯಚಟಿವಟಿಕೆಗಳ ಕುರಿತು ವಿವರವಾಗಿ ಹೇಳಿದರು.
ಪ್ರಶ್ನೆಗಳಿಗೆ ಉತ್ತರಿಸಿದ ಬ್ಯಾಂಕ್ ಅಧ್ಯಕ್ಷ ಪ್ರಭುದೇವ ಕಲಬುರ್ಗಿ; ಮಾಜಿ ನಿರ್ದೇಶಕರ ಪ್ರಶ್ನೆಗೆ ತಿರುಗೇಟು:
ದಿ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್‌ನ 67ನೇ ವಾರ್ಷಿಕ ಮಹಾಸಭೆಯಲ್ಲಿ ಮಾಜಿ ನಿರ್ದೇಶಕ ವೆಂಕನಗೌಡ ಪಾಟೀಲ ಅವರು ಐದು ದಿನಗಳ ಮುಂಚಿತವಾಗಿ ಲಿಖಿತ ರೂಪದಲ್ಲಿ ಸಲ್ಲಿಸಿದ್ದ 12 ಪ್ರಶ್ನೆಗಳಿಗೆ ಬ್ಯಾಂಕ್ ಅಧ್ಯಕ್ಷ ಪ್ರಭುದೇವ ಕಲಬುರ್ಗಿ ಉತ್ತರ ನೀಡಿದರು.
ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಮಾತನಾಡಿದ ಅಧ್ಯಕ್ಷರು, ಬ್ಯಾಂಕಿನ ನಿರ್ದೇಶಕರು ಕೇವಲ ಸಾಲ ಮಂಜೂರು ಮಾಡುವುದಷ್ಟೇ ಅಲ್ಲ, ಮಂಜೂರಾದ ಸಾಲಗಳ ಸಮರ್ಪಕ ವಸೂಲಾತಿಗೆ ಸಹ ಮಧ್ಯಸ್ಥಿಕೆ ವಹಿಸಿ ಶ್ರಮಿಸಬೇಕಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ, ಒಬ್ಬ ಗ್ರಾಹಕರ ವೈಯಕ್ತಿಕ ಖಾತೆಯ ಮಾಹಿತಿಯನ್ನು ಸಾರ್ವಜನಿಕ ಸಭೆಯಲ್ಲಿ ಪ್ರಶ್ನಿಸುವುದು ಬ್ಯಾಂಕಿಂಗ್ ನಿಯಮಗಳು ಮತ್ತು ಗ್ರಾಹಕರ ಗೌಪ್ಯತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮಾಜಿ ನಿರ್ದೇಶಕರಾಗಿದ್ದವರಿಗೆ ಬ್ಯಾಂಕಿನ ನಿಯಮಗಳು ಹಾಗೂ ಗ್ರಾಹಕರ ಮಾಹಿತಿಯ ಗೌಪ್ಯತೆ ಕುರಿತು ಅರಿವು ಇರಬೇಕು ಎಂಬ ಅರ್ಥದಲ್ಲಿ ಅಧ್ಯಕ್ಷ ಪ್ರಭುದೇವ ಕಲಬುರ್ಗಿ ಪ್ರತಿಕ್ರಿಯೆ ನೀಡಿದರು. ಅವರ ಈ ಉತ್ತರಕ್ಕೆ ಸಭೆಯಲ್ಲಿ ಕೆಲಕಾಲ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಶ್ರೀಕಾಂತ ಚಲವಾದಿ, ನಿರ್ದೇಶಕರಾದ ಸಂಗನಗೌಡ ಬಿರಾದಾರ(ಜಿಟಿಸಿ), ಸತೀಶ ಓಸ್ವಾಲ್‌, ರಾಜಶೇಖರ ಕರಡ್ಡಿ, ನಿಂಗಪ್ಪ ಚಟ್ಟೇರ, ಅಜೀತ ನಾಗಠಾಣ, ಚನ್ನಪ್ಪಗೌಡ ಬಿರಾದಾರ, ಗುರುಲಿಂಗಪ್ಪಗೌಡ ಬಿರಾದಾರ, ವಿಜಯಲಕ್ಷ್ಮೀ ಬೂದಿಹಾಳಮಠ, ರಕ್ಷಿತಾ ಬಿದರಕುಂದಿ, ಶ್ರೀಶೈಲ ಪೂಜಾರಿ, ನಾಗಭೂಷಣ ನಾವದಗಿ, ರವಿ ಗೂಳಿ, ವ್ಯವಸ್ಥಾಪಕಿ ಎಸ್ೆಸ್.ನಾಡಗೌಡ, ಸಹಾಯಕ ವ್ಯವಸ್ಥಾಪಕ ಪಿ.ಡಿ.ಲಕ್ಷಟ್ಟಿ, ಚೇತನ ನಡಗೇರಿ, ಪಿ.ಎ.ಹಳ್ಳೂರ, ಎಸ್.ಎಂ.ಕಲಬುರ್ಗಿ, ಎಸ್.ಎಸ್.ಬಿರಾದಾರ, ಎಚ್.ಎನ್.ಲಮಾಣಿೆ, ಎಸ್.ಎಸ್.ಜಿರ್ಲಿ, ಎಸ್.ಎಂ.ನಾಗಠಾಣ, ಎಸ್.ಜಿ.ಬೇನಾಳ, ಪಿ.ಸಿ.ಬಿರಾದಾರ, ಎಂ.ಎಸ್.ಕಡಿ,ಆಯ್.ಆರ್.ಅನ್ನಗೌನಿ, ಕೆ.ಎಸ್.ನಾಡಗೌಡ, ಎಸ್.ಎಸ್.ಬ್ಯಾಮಕೋಡ, ಬಿ.ಎಸ್.ಮಾದರ,ಎಸ್.ಎಂ.ಮೋಟಗಿ,ಎಸ್.ಬಿ.ಕತ್ತಿ ಹಾಗೂ ಬ್ಯಾಂಕಿನ ಸರ್ವ ಸದಸ್ಯರಿದ್ದರು.

ಹೆಚ್ಚಿನ ಸುದ್ದಿ