ಆರೋಗ್ಯಕರ ಆಹಾರ ಆರ್ಡರ್ ಮಾಡಿ, ಉಚಿತ ‘ಜಿಮ್’ ಚಂದಾದಾರಿಕೆ ಗೆಲ್ಲಿ! ಏನಿದು ‘ಈಟ್‌ರೈಟ್ ಸ್ಟ್ರೀಕ್ ಚಾಲೆಂಜ್’?
ಬೆಂಗಳೂರು: ಆರೋಗ್ಯಕರ ಆಹಾರ ಮತ್ತು ದೈನಂದಿನ ವ್ಯಾಯಾಮ – ಈ ಎರಡನ್ನೂ ಒಗ್ಗೂಡಿಸಿ ಜನರಲ್ಲಿ ಸಂಪೂರ್ಣ ಆರೋಗ್ಯವನ್ನು (360 ಡಿಗ್ರಿ ವೆಲ್‌ನೆಸ್) ಉತ್ತೇಜಿಸಲು ಸ್ವಿಗ್ಗಿ ಮತ್ತು ದೇಶದ ಅತಿದೊಡ್ಡ ಫಿಟ್‌ನೆಸ್ ನೆಟ್‌ವರ್ಕ್ ಫಿಟ್‌ಪಾಸ್ ಕೈಜೋಡಿಸಿವೆ.
ಭಾರತದ ಪ್ರಮುಖ ಆನ್ ಡಿಮ್ಯಾಂಡ್ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿಯು ಇತ್ತೀಚೆಗೆ ಆರಂಭಿಸಿರುವ ತನ್ನ ‘ಈಟ್‌ರೈಟ್’ ಉಪಕ್ರಮದ ಯಶಸ್ಸಿನ ಬೆನ್ನಲ್ಲೇ ಈ ಪಾಲುದಾರಿಕೆಯನ್ನು ಘೋಷಿಸಿದೆ. ಇದಕ್ಕಾಗಿ ಸ್ವಿಗ್ಗಿಯಲ್ಲಿ ʼಈಟ್‌ರೈಟ್ ಸ್ಟ್ರೀಕ್ ಚಾಲೆಂಜ್ʼ ಅನ್ನು ಆರಂಭಿಸಲಾಗಿದೆ. ಯಾರು ನಿರಂತರವಾಗಿ ಸ್ವಿಗ್ಗಿಯಲ್ಲಿ ಆರೋಗ್ಯಕರ ಆಹಾರಗಳನ್ನು ಆರ್ಡರ್ ಮಾಡುತ್ತಾರೋ, ಅಂತವರಿಗೆ ಭರ್ಜರಿ ಬಹುಮಾನಗಳನ್ನು ಘೋಷಿಸಲಾಗಿದೆ.
ಚಾಲೆಂಜ್‌ನಲ್ಲಿ ಸಿಗುವ ಬಹುಮಾನಗಳೇನು?
ಈ ಸ್ಟ್ರೀಕ್ ಚಾಲೆಂಜ್‌ನಲ್ಲಿ, ಗ್ರಾಹಕರು ಸ್ವಿಗ್ಗಿ ಆ್ಯಪ್‌ನಲ್ಲಿರುವ ‘ಈಟ್‌ರೈಟ್’ ಆಯ್ಕೆಗಳ ಮೂಲಕ ಆರೋಗ್ಯಕರ ಆಹಾರವನ್ನು ಆರ್ಡರ್ ಮಾಡಿ ಮೈಲ್‌ಸ್ಟೋನ್‌ಗಳನ್ನು ಪೂರ್ಣಗೊಳಿಸಬೇಕು. ಈ ಟಾಸ್ಕ್ ಪೂರ್ಣಗೊಳಿಸಿದರೆ 300 ರೂ.ವರೆ ಫ್ರೀಕ್ಯಾಶ್ ಸಿಗಲಿದೆ.
ಇನ್ನು ಪ್ರತಿ ವಾರ ಅತಿ ಹೆಚ್ಚು ಆರೋಗ್ಯಕರ ಆಹಾರ ಆರ್ಡರ್ ಮಾಡುವ ಟಾಪ್ 20 ಬಳಕೆದಾರರಿಗೆ ಬರೋಬ್ಬರಿ 2,999 ರೂ. ಮೌಲ್ಯದ ‘ಫಿಟ್‌ಪಾಸ್ 360’ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.
ಫಿಟ್‌ಪಾಸ್ 360ಯಿಂದ ಏನು ಲಾಭ?
ಈ ಫಿಟ್‌ಪಾಸ್ ಚಂದಾದಾರಿಕೆ ಕೇವಲ ಜಿಮ್‌ಗೆ ಮಾತ್ರ ಸೀಮಿತವಾಗಿಲ್ಲ. ಇದು ದೇಶದ 150ಕ್ಕೂ ಹೆಚ್ಚು ನಗರಗಳಲ್ಲಿರುವ 12,000ಕ್ಕೂ ಅಧಿಕ ಪ್ರೀಮಿಯಂ ಜಿಮ್‌ಗಳು ಮತ್ತು ಫಿಟ್‌ನೆಸ್ ಕೇಂದ್ರಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಜೊತೆಗೆ, ತಜ್ಞರ ನ್ಯೂಟ್ರಿಷನ್ ಗೈಡೆನ್ಸ್, ವರ್ಚುವಲ್ ಯೋಗ ಕ್ಲಾಸ್, 29 ಪ್ರಮುಖ ಆರೋಗ್ಯ ನಿಯತಾಂಕಗಳನ್ನು ಒಳಗೊಂಡ ವಾರ್ಷಿಕ ಹೆಲ್ತ್ ಚೆಕ್‌ಅಪ್, ಮತ್ತು ವೈದ್ಯರೊಡನೆ ಟೆಲಿಕನ್ಸಲ್ಟೇಶನ್ ಸೌಲಭ್ಯವನ್ನೂ ನೀಡುತ್ತದೆ.
ಆರೋಗ್ಯಯುತ ಜೀವನದತ್ತ ಭಾರತೀಯರ ಹೆಜ್ಜೆ
ಭಾರತದಲ್ಲಿ ಪ್ರಸ್ತುತ 50 ಲಕ್ಷಕ್ಕೂ ಹೆಚ್ಚು ಜನರು ಪ್ರತಿ ತಿಂಗಳು ಸ್ವಿಗ್ಗಿಯಲ್ಲಿ ‘ಈಟ್‌ರೈಟ್’ ಮೂಲಕ ಆರೋಗ್ಯಕರ ಆಹಾರವನ್ನು ಆರ್ಡರ್ ಮಾಡುತ್ತಿದ್ದಾರೆ. ಬೆಳಗ್ಗೆ ರಾಗಿ ಇಡ್ಲಿ, ದೋಸೆ ಮತ್ತು ಉಪ್ಪಿಟ್ಟಿನಂತ ಕಡಿಮೆ ಕ್ಯಾಲೊರಿ ಇರುವ ಲಘು ಉಪಹಾರವನ್ನು ಸೇವಿಸುತ್ತಿರುವ ಜನರು, ಮಧ್ಯಾಹ್ನ ಮತ್ತು ರಾತ್ರಿಯ ಹೊತ್ತಿಗೆ ಪ್ರೋಟೀನ್-ಭರಿತ ಆಹಾರಗಳತ್ತ ಮುಖ ಮಾಡುತ್ತಿದ್ದಾರೆ. ಚಿಕನ್ ರೈಸ್ ಬೌಲ್ಸ್, ಪನೀರ್ ಟಿಕ್ಕಾ ಸ್ಯಾಂಡ್‌ವಿಚ್, ಡಬಲ್ ಎಗ್ ರೋಲ್ಸ್‌ಗಳಂತಹ ಹೆಚ್ಚಿನ ಪ್ರೋಟೀನ್ ಇರುವ ಆಹಾರಗಳು ಶೇ. 60-70ರಷ್ಟು ಆರ್ಡರ್ ಆಗುತ್ತಿವೆ.
ಈ ಪಾಲುದಾರಿಕೆ ಬಗ್ಗೆ ಮಾತನಾಡಿರುವ ಸ್ವಿಗ್ಗಿಯ ಉಪಾಧ್ಯಕ್ಷ ದೀಪಕ್ ಮಾಲೂ, “ಆರೋಗ್ಯಕರ ಜೀವನವು ದೈನಂದಿನ ಚಿಕ್ಕ ಚಿಕ್ಕ ಆಯ್ಕೆಗಳಿಂದಲೇ ಶುರುವಾಗುತ್ತದೆ. ಈಟ್‌ರೈಟ್ ಸ್ಟ್ರೀಕ್ ಚಾಲೆಂಜ್ ಮೂಲಕ ಗ್ರಾಹಕರು ಆರೋಗ್ಯಕರ ಆಯ್ಕೆಗಳನ್ನು ಮಾಡಲು ನಾವು ಪ್ರೇರೇಪಿಸುತ್ತಿದ್ದೇವೆ. ಫಿಟ್‌ಪಾಸ್ ಜೊತೆಗಿನ ಪಾಲುದಾರಿಕೆಯು, ಪೌಷ್ಟಿಕ ಆಹಾರದ ಜೊತೆಗೆ ಫಿಟ್‌ನೆಸ್ ಮತ್ತು ತರಬೇತಿಯನ್ನು ಸೇರಿಸಿ ಗ್ರಾಹಕರಿಗೆ ಸಂಪೂರ್ಣ ಆರೋಗ್ಯದ ಅಭ್ಯಾಸವನ್ನು ಬೆಳೆಸಲು ಸಹಾಯ ಮಾಡುತ್ತದೆ,” ಎಂದರು.
ಫಿಟ್‌ಪಾಸ್‌ನ ಸಹ ಸ್ಥಾಪಕಿ ಆರುಷಿ ವರ್ಮಾ ಮಾತನಾಡಿ, “ಸಂಪೂರ್ಣ ಆರೋಗ್ಯವನ್ನು ಎಲ್ಲರಿಗೂ ಸುಲಭವಾಗಿ ಸಿಗುವಂತೆ ಮಾಡುವುದು ನಮ್ಮ ಉದ್ದೇಶ. ಆರೋಗ್ಯಕರ ಜೀವನ ಎನ್ನುವುದು ವ್ಯಕ್ತಿಯ ಚಟುವಟಿಕೆಗಳು ಮತ್ತು ಆಹಾರ ಪದ್ಧತಿಯ ಒಟ್ಟು ಫಲಿತಾಂಶವಾಗಿದೆ. ಈ ಪಾಲುದಾರಿಕೆಯ ಮೂಲಕ, ಫಿಟ್‌ಪಾಸ್ ಸರಿಯಾದ ವ್ಯಾಯಾಮವನ್ನು ಒದಗಿಸಿದರೆ, ಸ್ವಿಗ್ಗಿ ಆರೋಗ್ಯಕರ ಆಹಾರದ ಆಯ್ಕೆಗಳನ್ನು ಒದಗಿಸುತ್ತದೆ,” ಎಂದು ಸಂತಸ ವ್ಯಕ್ತಪಡಿಸಿದರು.
ಚಾಲೆಂಜ್‌ನಲ್ಲಿ ಭಾಗವಹಿಸುವುದು ಹೇಗೆ?
ಗ್ರಾಹಕರು ತಮ್ಮ ಸ್ವಿಗ್ಗಿ ಆ್ಯಪ್‌ನಲ್ಲಿ ʼಈಟ್‌ರೈಟ್ʼ ಎಂದು ಸರ್ಚ್ ಮಾಡುವ ಮೂಲಕ ಈ ಆರೋಗ್ಯಕರ ಆಹಾರಗಳ ಪಟ್ಟಿಯನ್ನು ನೋಡಬಹುದು ಮತ್ತು ಆರ್ಡರ್ ಮಾಡುವ ಮೂಲಕ ಈ ಚಾಲೆಂಜ್‌ನಲ್ಲಿ ಭಾಗವಹಿಸಬಹುದು.
