Tuesday, August 4, 2026
HomeUncategorizedಬಾಳೆಹೊನ್ನೂರಿನ ಸೇತುವೆ ಕಾಮಗಾರಿ: 9 ವರ್ಷವಾದರೂ ಪೂರ್ಣಗೊಳ್ಳದ ಕಾಮಗಾರಿ!

ಬಾಳೆಹೊನ್ನೂರಿನ ಸೇತುವೆ ಕಾಮಗಾರಿ: 9 ವರ್ಷವಾದರೂ ಪೂರ್ಣಗೊಳ್ಳದ ಕಾಮಗಾರಿ!

ಭದ್ರಾ ನದಿಗೆ ಅಡ್ಡಲಾಗಿ ಬಾಳೆಹೊನ್ನೂರಿನಲ್ಲಿ ನೂತನ ಸೇತುವೆ ನಿರ್ಮಾಣ ಮಾಡಲು 2017ರಲ್ಲಿ ಅಂದಿನ ಶಾಸಕರಾಗಿದ್ದ ಡಿ.ಎನ್. ಜೀವರಾಜ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.

ಜೀವರಾಜ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಕಾಮಗಾರಿ ವೇಗವಾಗಿ ಆರಂಭವಾಗಿತ್ತು. ಆದರೆ ರಾಜೇಗೌಡರು ಶಾಸಕರಾದ ನಂತರ ಕಾಮಗಾರಿ ಸ್ಥಗಿತಗೊಂಡಿತು ಎಂಬ ಆರೋಪ ಕೇಳಿಬರುತ್ತಿದೆ.

ಈ ಸೇತುವೆ ಕಾಮಗಾರಿಗೆ KRDCL ಮೂಲಕ ಅಗತ್ಯ ಅನುದಾನ ಕೊಡಿಸುವಲ್ಲಿ ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ್ ಕುಮಾರ್ ಅವರ ಪಾತ್ರ ಪ್ರಮುಖವಾಗಿತ್ತು. ಆದರೂ ಕಾಮಗಾರಿ ಮಾತ್ರ ಇಂದಿಗೂ ಪೂರ್ಣಗೊಂಡಿಲ್ಲ.

ಇದೀಗ 9 ವರ್ಷ ಕಳೆದರೂ ಸೇತುವೆ ನಿರ್ಮಾಣ ಪೂರ್ಣಗೊಂಡಿಲ್ಲ. ಕಾಮಗಾರಿಗಾಗಿ ತಂದು ಇಟ್ಟಿದ್ದ ನಿರ್ಮಾಣ ಸಾಮಗ್ರಿಗಳೂ ಬಳಕೆಯಾಗದೆ ಹಾಳಾಗುವ ಸ್ಥಿತಿಗೆ ತಲುಪಿವೆ.

ಹೆಚ್ಚಿನ ಸುದ್ದಿ