ಬೆಂಗಳೂರು ಮಾರ್ಚ್ 17;
ಸಂಬಳವಿಲ್ಲದೇ ನೀರು ಸರಬರಾಜು ನೌಕರ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ನೀರು ಸರಬರಾಜು ನೌಕರರಿಂದ ತೀವ್ರ ಅಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಗಾಂಧಿ ಭವನದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ಪೌರನೀರು ಸರಬರಾಜು ನೌಕರರ ಮುಂಬರುವ ಬಜೆಟ್ ನಲ್ಲಿ ವಿಶೇಷ ನೇರನೇಮಕಾತಿ/ನೇರಪಾವತಿ ಬೇಡಿಕೆಯನ್ನು ಈಡೇರಿಸದಿದ್ದರೆ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಎಲ್ಲ ಪಾಲಿಕೆಗಳ ನೀರು ಸರಬರಾಜು ನೌಕರರು ಎಚ್ಚರಿಕೆ ನೀಡಿದ್ದಾರೆ.
ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೌರ ನೀರು ಸರಬರಾಜು ನೌಕರರ ಮಹಾಸಂಘದ ಅಧ್ಯಕ್ಷ ಪಾವಗಡ ಶ್ರೀರಾಮ್,ಮಹಾನಗರಪಾಲಿಕೆ,ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿಗಳಲ್ಲಿ ಹೊರಗುತ್ತಿಗೆ ಪೌರನೀರು ಸರಬರಾಜು ನೌಕರರು ಕಳೆದ 25-30 ವರ್ಷಗಳಿಂದ ಯಾವುದೇ ನೇಮಕಾತಿ, ಸೇವಾಭದ್ರತೆ ಇಲ್ಲದೇ ನಗರ/ಪಟ್ಟಣಗಳಲ್ಲಿ ನೀರು ಸರಬರಾಜು ಸೇವೆಯನ್ನು ಇದುವರೆಗೂ ನೇರನೇಮಕಾತಿ/ನೇರವಾವತಿ ಮಾಡಿರುವುದಿಲ್ಲ. ಮುನ್ಸಿಪಲ್ ಕಾಯ್ದೆ ಪ್ರಕಾರ ಹೊರಗುತ್ತಿಗೆ ಪೌರನೀರು ಸರಬರಾಜು ನೌಕರರು ಸಹ ಪೌರಕಾರ್ಮಿಕರೇ ಆಗಿದ್ದಾರೆ. ಈಗಾಗಲೇ ಮಂಜೂರಾತಿ ಪಡೆದ ಹುದ್ದೆಗಳು ಹಲವಾರು ವರ್ಷಗಳಿಂದ ಖಾಲಿ ಇವೆ, ಸರ್ಕಾರ ವಿಳಂಬ ಧೋರಣೆಯನ್ನು ಮಾಡುತ್ತಿದೆ.ಮಂಜೂರಾತಿ ಪಡೆದ ಹುದ್ದೆಗಳ ಎದುರಾಗಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ಪೌರನೀರು ಸರಬರಾಜು ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ವಿಶೇಷ ನೇರನೇಮಕಾತಿ/ನೇರಪಾವತಿ ಮಾಡಲು ಬೆಂಗಳೂರಿನ ಪೀಡಂ ಪಾರ್ಕ್ ನಲ್ಲಿನಮ್ಮ ಬೇಡಿಕೆಗಳನ್ನು ಈಡೇರಿಸಲು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಎಚ್ಚರಿಕೆ ನೀಡಿದರು.
