ಸಮುದಾಯ ಲೆಕ್ಕಪರಿಶೋಧಕರ ಆಯ್ಕೆಗೆ ಅರ್ಜಿ ಆಹ್ವಾನ
ಯಾದಗಿರಿ,ಸ್ವಸಹಾಯ ಗುಂಪುಗಳು ಮತ್ತು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಆಂತರಿಕ ಲೆಕ್ಕಪರಿಶೋಧನೆ ಕೈಗೊಳ್ಳಲು ಅನುಕೂಲವಾಗುವಂತೆ ಸಮುದಾಯ ಲೆಕ್ಕಪರಿಶೋಧಕರನ್ನು ಎಂಪ್ಯಾನ್ಲಮೆಂಟ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲು ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್ ಸಂಸ್ಥೆಯು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಪಂಚಯತ ಯೋಜನಾ ನಿರ್ದೇಶಕರು (ಡಿಆರ್ಡಿಎ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಕಾಂ./ಎಂ.ಕಾಂ/ಬಿಬಿಎ ಅಥವಾ ಎಂಬಿಎ (ಫೈನಾನ್ಸ್) ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ತಾಂತ್ರಿಕ ಸೇವೆಗಳನ್ನು ನೀಡಲು ಅರ್ಜಿ ಸಲ್ಲಿಸಬಹುದು.
ಅರ್ಹ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಆಯಾ ತಾಲ್ಲೂಕು ಪಂಚಾಯತ ಕಛೇರಿಗೆ ಭೇಟಿ ನೀಡಿ ನಿಗಧಿತ ಅರ್ಜಿ ನಮೂನೆಗಳನ್ನು ಪಡೆದುಕೊಂಡು ಖುದ್ದಾಗಿ ತಾಲ್ಲೂಕು ಅಬಿಯಾನ ನಿರ್ವಹಣಾ ಘಟಕಕ್ಕೆ (ಎನ್ಆರ್ಎಲ್ಎಂ ವಿಭಾಗ) ದಿನಾಂಕ: 15-08-2026 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದಾಗಿದೆ ಎಂದು ಅವರು ತಿಳಿಸಿದ್ದಾರೆ.
