Saturday, June 6, 2026
HomeUncategorizedಸೊರಬ ಲಂಚ ಪಡೆಯುತ್ತಿದ್ದ ವೇಳೆ ʻಲೋಕಾʼ ಬಲೆ ಬಿದ್ದ ಕಿರಿಯ ಅಭಿಯಂತರ ಪರಶುರಾಮ ನಾಗರಾಳ

ಸೊರಬ ಲಂಚ ಪಡೆಯುತ್ತಿದ್ದ ವೇಳೆ ʻಲೋಕಾʼ ಬಲೆ ಬಿದ್ದ ಕಿರಿಯ ಅಭಿಯಂತರ ಪರಶುರಾಮ ನಾಗರಾಳ

ಶಿವಮೊಗ್ಗ: ಮುಗಿದ ರಸ್ತೆ ಕಾಮಗಾರಿ ಹಣ ಮಂಜೂರಾತಿಗೆ ಲಂಚ ಸ್ವೀಕರಿಸುತ್ತಿದ್ದ ಸೊರಬ ಉಪ ವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಿರಿಯ ಅಭಿಯಂತರ ಪರಶುರಾಮ್ ಹೆಚ್.ನಾಗರಾಳ ಎಂಬವರನ್ನು ಶಿರಾಳಕೊಪ್ಪದಲ್ಲಿ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದರು.ದೂರುದಾರ ಲಿಂಗಾರಾಜು ಶಿವಪ್ಪ ಉಳ್ಳಾಗಡ್ಡಿ ಎಂಬವರು ಸೊರಬ ತಾಲೂಕಿನ ಚೀಲನೂರು ಹಾಗೂ ಕಣ್ಣೂರು ಗ್ರಾಮಗಳ ನಡುವಿನ ರಸ್ತೆ ಡಾಂಬರೀಕರಣ, ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಪಿಎಂಶ್ರೀ ಯೋಜನೆಯಡಿ ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದ ಶಾಲೆ ದುರಸ್ಥಿ ಹಾಗೂ ಅಭಿವೃದ್ಧಿ ಸೇರಿ ಒಟ್ಟು 77.59 ಲಕ್ಷ ರೂಪಾಯಿ ಕಾಮಗಾರಿ ಮುಗಿಸಿದ್ದರು. ಇದರ ಬಿಲ್ ಮಂಜೂರಾತಿಗೆ ಶೇ.3ರಷ್ಟು ಲಂಚಕ್ಕೆ ಪರಶುರಾಮ್ ಬೇಡಿಕೆ ಇಟ್ಟು, 1.63 ಲಕ್ಷ ಪಡೆದುಕೊಂಡಿದ್ದರು. ಬಾಕಿ 70 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಸೋಮವಾರ ಪರಶುರಾಮ್​, ಶಿರಾಳಕೊಪ್ಪದ ಶಿವಮೊಗ್ಗ ರಸ್ತೆಯಲ್ಲಿ 30 ಸಾವಿರ ರೂ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ. ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸ್ ಇನ್ಸ್​ಪೆಕ್ಟರ್​ ​ರುದ್ರೇಶ್ ಕೆ.ಪಿ ಕೈಗೊಂಡಿದ್ದಾರೆ ಎಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ್ ಚೌಧರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ವರದಿ: ಯಮನೂರಪ್ಪ ಆರ್ ಅಬ್ಬಿಗೇರಿ

ಹೆಚ್ಚಿನ ಸುದ್ದಿ