Tuesday, August 4, 2026
Homeಸಿನಿಮಾ40 ಅದೃಷ್ಟಶಾಲಿ ಅಭಿಮಾನಿಗಳ ಕನಸು ನನಸು: ಮುಂಬೈನಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಭೇಟಿಯಾದ ಫ್ಯಾನ್ಸ್!

40 ಅದೃಷ್ಟಶಾಲಿ ಅಭಿಮಾನಿಗಳ ಕನಸು ನನಸು: ಮುಂಬೈನಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಭೇಟಿಯಾದ ಫ್ಯಾನ್ಸ್!

40 ಅದೃಷ್ಟಶಾಲಿ ಅಭಿಮಾನಿಗಳ ಕನಸು ನನಸು: ಮುಂಬೈನಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಭೇಟಿಯಾದ ಫ್ಯಾನ್ಸ್!

ಮುಂಬೈ: ನಮ್ಮ ನೆಚ್ಚಿನ ಸೂಪರ್‌ಸ್ಟಾರ್‌ನನ್ನು ಮುಖಾಮುಖಿ ಭೇಟಿಯಾಗುವುದು ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ? ಅದರಲ್ಲೂ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಎಂದರೆ ಭಾರತೀಯರಿಗೆ ಇನ್ನಿಲ್ಲದ ಕ್ರೇಜ್‌. ಇದೀಗ ಐಟಿಸಿಯ ಜನಪ್ರಿಯ ಬ್ರ್ಯಾಂಡ್ ‘ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ’ ಭಾರತದ 40 ಅದೃಷ್ಟಶಾಲಿ ಗ್ರಾಹಕರಿಗೆ ಶಾರುಖ್‌ ಖಾನ್‌ ಭೇಟಿಯಾಗುವ ಅವಕಾಶ ಕಲ್ಪಿಸಿದೆ. ಈ ಮೂಲಕ ಅವರ ಕನಸನ್ನು ನನಸು ಮಾಡಿದೆ.

ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿಯ ‘ಹರ್ ದಿಲ್ ಕಿ ಫ್ಯಾಂಟಸಿ’ ಅಭಿಯಾನದ ಭಾಗವಾಗಿ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವರ್ಣರಂಜಿತ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ, 40 ಅದೃಷ್ಟಶಾಲಿ ವಿಜೇತರು ಶಾರುಖ್ ಖಾನ್ ಅವರೊಂದಿಗೆ ಮುಕ್ತವಾಗಿ ಮಾತನಾಡುವ, ಫೋಟೋ ಕ್ಲಿಕ್ಕಿಸಿಕೊಳ್ಳುವ ಹಾಗೂ ಮರೆಯಲಾಗದ ಕ್ಷಣಗಳನ್ನು ಕಳೆಯುವ ಅವಕಾಶ ಪಡೆದರು.

ಏನಿದು ‘1 ಮಿಲಿಯನ್ ಫ್ಯಾಂಟಸಿಸ್’ ಅಭಿಯಾನ?

ಗ್ರಾಹಕರ ಆಸೆಗಳನ್ನು ಈಡೇರಿಸುವ ಉದ್ದೇಶದಿಂದ ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿಯು 2023ರಲ್ಲಿ ಶಾರುಖ್ ಖಾನ್ ಅವರೊಂದಿಗೆ ‘ಹರ್ ದಿಲ್ ಕಿ ಫ್ಯಾಂಟಸಿ’ ಎಂಬ ವೇದಿಕೆಯನ್ನು ಹುಟ್ಟುಹಾಕಿತ್ತು. ಇದರ ಮುಂದುವರಿದ ಭಾಗವಾಗಿ ‘1 ಮಿಲಿಯನ್ ಫ್ಯಾಂಟಸಿಸ್’ ಎಂಬ ಬೃಹತ್ ಉಪಕ್ರಮವನ್ನು ಶುರುಮಾಡಿದ್ದು, ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಆಕರ್ಷಕ ಬಹುಮಾನಗಳನ್ನು ನೀಡಿ ಖುಷಿಪಡಿಸಿದೆ.

ಈ ಅಭಿಯಾನದಲ್ಲಿ ಗ್ರಾಹಕರಿಗೆ ಐಷಾರಾಮಿ ಎಸ್‌ಯುವಿ ಕಾರುಗಳು, ಯುರೋಪ್ ಮತ್ತು ಥೈಲ್ಯಾಂಡ್‌ಗೆ ವಿದೇಶಿ ಪ್ರವಾಸ, ಕ್ರೂಸರ್ ಬೈಕ್‌ಗಳು ಸೇರಿದಂತೆ ಭರ್ಜರಿ ಬಹುಮಾನಗಳನ್ನು ನೀಡಲಾಗಿದೆ. ಶಾರುಖ್ ಭೇಟಿಯ ಅವಕಾಶ ಈ ಅಭಿಯಾನದ ಅತ್ಯಂತ ಮಹತ್ವದ ಕ್ಷಣವಾಗಿತ್ತು.

ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಾರುಖ್ ಖಾನ್, “ನಮ್ಮೆಲ್ಲರ ಜೀವನದಲ್ಲಿಯೂ ಕನಸಿಗೆ ವಿಶೇಷ ಸ್ಥಾನ ಇದೆ. ಅದು ನಮಗೆ ಸ್ಫೂರ್ತಿ ನೀಡುತ್ತದೆ, ಉತ್ಸಾಹ ತುಂಬುತ್ತದೆ ಮತ್ತು ಭವಿಷ್ಯದ ಬಗ್ಗೆ ಸುಂದರವಾದ ನಿರೀಕ್ಷೆಗಳನ್ನು ಹುಟ್ಟುಹಾಕುತ್ತದೆ. ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿಯು ಈ ಅಭಿಯಾನದ ಭಾಗವಾಗಿ ಅಭಿಮಾನಿಗಳಿಗೆ ಮರೆಯಲಾಗದ ಅನುಭವಗಳನ್ನು ನೀಡುತ್ತಿರುವುದು ನಿಜಕ್ಕೂ ಖುಷಿಯ ವಿಚಾರ,” ಎಂದರು.

“ಗ್ರಾಹಕರಿಗೆ ಕೇವಲ ಬಹುಮಾನಗಳನ್ನು ನೀಡುವುದಷ್ಟೇ ಅಲ್ಲದೆ, ಅವರು ಜೀವಮಾನಪೂರ್ತಿ ನೆನಪಿಟ್ಟುಕೊಳ್ಳುವಂತಹ ಅನುಭವವನ್ನು ನೀಡುವುದು ನಮ್ಮ ಉದ್ದೇಶವಾಗಿತ್ತು. ಶಾರುಖ್ ಖಾನ್ ಅವರನ್ನು ಭೇಟಿಯಾಗುವ ಈ ಅವಕಾಶವು, ಅಸಾಮಾನ್ಯ ಕನಸುಗಳನ್ನು ನನಸು ಮಾಡುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ” ಎಂದು ಸನ್‌ಫೀಸ್ಟ್ ಮಾರ್ಕೆಟಿಂಗ್ ಹೆಡ್ ಸೂರಜ್ ಕಥುರಿಯಾ ತಿಳಿಸಿದರು.

ಶಾರುಖ್‌ ಖಾನ್‌ ಕಂಡು ಕುಣಿದು ಕುಪ್ಪಳಿಸಿದ ಅಭಿಮಾನಿಗಳು

ಶಾರುಖ್ ಖಾನ್ ಅವರನ್ನು ಭೇಟಿಯಾಗುವುದು ತಮ್ಮ ಬಹುಕಾಲದ ಕನಸಾಗಿತ್ತು ಎಂದಿರುವ ತಮಿಳುನಾಡಿನ 23 ವರ್ಷದ ಕಿಶೋರ್ ಗಣೇಶನ್, “ಪರದೆಯ ಮೇಲೆ ಅವರನ್ನು ನೋಡುತ್ತಾ ಬೆಳೆದ ನನಗೆ, ನೇರವಾಗಿ ಭೇಟಿಯಾಗುವ ಅವಕಾಶ ಸಿಗುತ್ತದೆ ಎಂದು ಅಂದುಕೊಂಡೇ ಇರಲಿಲ್ಲ. ನಾನು ಆಯ್ಕೆಯಾದ ಕ್ಷಣದಿಂದ ಹಿಡಿದು, ಅವರೊಂದಿಗೆ ಮಾತನಾಡಿ ಫೋಟೋ ತೆಗೆಸಿಕೊಳ್ಳುವವರೆಗಿನ ಕ್ಷಣಗಳು ಒಂದು ಮ್ಯಾಜಿಕ್‌ನಂತೆ ಇತ್ತು. ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ನನ್ನ ಕನಸನ್ನು ನನಸು ಮಾಡಿದೆ,” ಎಂದು ಸಂತಸ ಹಂಚಿಕೊಂಡರು.

ಹೆಚ್ಚಿನ ಸುದ್ದಿ