Saturday, June 6, 2026
Homeದೇಶಸ್ಟಾರ್ಟ್ ಅಪ್ ಗಳಿಂದ 40 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ: ಪ್ರಧಾನಿ ಮೋದಿ

ಸ್ಟಾರ್ಟ್ ಅಪ್ ಗಳಿಂದ 40 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ: ಪ್ರಧಾನಿ ಮೋದಿ

ನವದೆಹಲಿ: 40 ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಭಾರತದ ಸ್ಟಾರ್ಟ್‌ಅಪ್‌ಗಳ ಪಾತ್ರ ಮಹತ್ವದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಷ್ಟ್ರೀಯ ರೋಜ್‌ಗಾರ್ ಮೇಳದಲ್ಲಿ 71,000 ಹೊಸ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ತ್ವರಿತ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುವ ಮೂಲಕ ದೇಶದ ಯುವಜನತೆಗೆ ಅವಕಾಶಗಳನ್ನು ಒದಗಿಸುವ ಬದ್ಧತೆ ಎನ್ ಡಿಎ ಸರಕಾರದ್ದು ಎಂದ ಅವರು, 15,000 ಕೋಟಿ ರಫ್ತುಗಳೊಂದಿಗೆ ರಕ್ಷಣಾ ವಲಯ ಈ ಹಿಂದೆಂದಿಗಿಂತಲೂ ಸಾಕಷ್ಟು ಸಾಧನೆ ಮಾಡಿದೆ ಎಂದವರು ಹೇಳಿದರು.

’ಸ್ಟಾರ್ಟ್‌ಅಪ್‌ಗಳು 40 ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ. ಇಂದು ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಇಂದಿನ ನವ ಭಾರತ ಅನುಸರಿಸುತ್ತಿರುವ ನೀತಿ ಮತ್ತು ಕಾರ್ಯತಂತ್ರವು ದೇಶದಲ್ಲಿ ಹೊಸ ಸಾಧ್ಯತೆಗಳು ಮತ್ತು ಅವಕಾಶಗಳನ್ನು ತೆರೆದಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಹೆಚ್ಚಿನ ಸುದ್ದಿ