Monday, August 10, 2026
Homeಜಿಲ್ಲಾ ಸುದ್ದಿಗಳುಸಮುದಾಯ ಲೆಕ್ಕಪರಿಶೋಧಕರ ಆಯ್ಕೆಗೆ ಅರ್ಜಿ ಆಹ್ವಾನ

ಸಮುದಾಯ ಲೆಕ್ಕಪರಿಶೋಧಕರ ಆಯ್ಕೆಗೆ ಅರ್ಜಿ ಆಹ್ವಾನ

ಸಮುದಾಯ ಲೆಕ್ಕಪರಿಶೋಧಕರ ಆಯ್ಕೆಗೆ ಅರ್ಜಿ ಆಹ್ವಾನ

ಯಾದಗಿರಿ,ಸ್ವಸಹಾಯ ಗುಂಪುಗಳು ಮತ್ತು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಆಂತರಿಕ ಲೆಕ್ಕಪರಿಶೋಧನೆ ಕೈಗೊಳ್ಳಲು ಅನುಕೂಲವಾಗುವಂತೆ ಸಮುದಾಯ ಲೆಕ್ಕಪರಿಶೋಧಕರನ್ನು ಎಂಪ್ಯಾನ್‍ಲಮೆಂಟ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲು ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್ ಸಂಸ್ಥೆಯು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಪಂಚಯತ ಯೋಜನಾ ನಿರ್ದೇಶಕರು (ಡಿಆರ್‍ಡಿಎ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಕಾಂ./ಎಂ.ಕಾಂ/ಬಿಬಿಎ ಅಥವಾ ಎಂಬಿಎ (ಫೈನಾನ್ಸ್) ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ತಾಂತ್ರಿಕ ಸೇವೆಗಳನ್ನು ನೀಡಲು ಅರ್ಜಿ ಸಲ್ಲಿಸಬಹುದು.
ಅರ್ಹ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಆಯಾ ತಾಲ್ಲೂಕು ಪಂಚಾಯತ ಕಛೇರಿಗೆ ಭೇಟಿ ನೀಡಿ ನಿಗಧಿತ ಅರ್ಜಿ ನಮೂನೆಗಳನ್ನು ಪಡೆದುಕೊಂಡು ಖುದ್ದಾಗಿ ತಾಲ್ಲೂಕು ಅಬಿಯಾನ ನಿರ್ವಹಣಾ ಘಟಕಕ್ಕೆ (ಎನ್‍ಆರ್‍ಎಲ್‍ಎಂ ವಿಭಾಗ) ದಿನಾಂಕ: 15-08-2026 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ