ಮುಂಬರುವ ಐಪಿಎಲ್ ಪಂದ್ಯಾವಳಿಗಳ ಸಮಯದಲ್ಲಿ ರಾತ್ರಿ ವೇಳೆ ಜನಸಂಚಾರ ಹೆಚ್ಚಿರುವ ಕಾರಣ ಮೆಟ್ರೋ ರೈಲಿನ ಸಂಚಾರ ಅವಧಿಯನ್ನು ಆಯಾ ದಿನಗಳಂದು ವಿಸ್ತರಿಸಿರುವುದಾಗಿ ಬಿಎಂಆರ್‍ಸಿಎಲ್ –ನಮ್ಮ ಮೆಟ್ರೋ ತಿಳಿಸಿದೆ. ಏ.2, ಏ.10, ಏ.17, ಏ.26 ಮತ್ತು ಮೇ 21 ರಂದು ಮೆಟ್ರೋ ರೈಲುಗಳು ತಡರಾತ್ರಿಯವರೆಗೆ ಕಾರ್ಯನಿರ್ವಹಿಸಲಿದೆ.
ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ ಸಂಸ್ಥೆ ಮಾರ್ಗದಲ್ಲಿ ಸಂಚರಿಸುವ ರೈಲು ಮುಂಜಾನೆ 1 ಗಂಟೆಯವರೆಗೆ ಕಾರ್ಯ ನಿರ್ವಹಿಸಲಿದೆ. ನಾಡಪ್ರಭು ಕೆಂಪೇಗೌಡ ಬಸ್‍ನಿಲ್ದಾಣ,ದಿಂದ ಕೊನೆಯ ರೈಲು ರಾತ್ರಿ 1.30 ಕ್ಕೆ ಹೊರಡಲಿದೆ.
ವೈಟ್‍ಫೀಲ್ಡ್ ಮತ್ತು ಕಾಡುಗೋಡಿ ಸಂಚಾರ ಮಾರ್ಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನಮ್ಮ ಮೆಟ್ರೋ ತಿಳಿಸಿದೆ. ಪ್ರಯಾಣಿಕರು ಎಲ್ಲಾ ರೀತಿಯ ಆನ್‍ಲೈನ್ ಟಿಕೆಟ್ ಮತ್ತು ಪೇಪರ್ ಟಿಕೆಟ್ ಬಳಸಿ ಪ್ರಯಾಣಿಸಬಹುದಾಗಿದೆ.

