Tuesday, August 4, 2026
Homeಚುನಾವಣೆ 2023‌ರಾಜ್ಯದಲ್ಲೂ ಗುಜರಾತ್‌ ಮಾಡೆಲ್: ಹಲವು ಬಿಜೆಪಿ ಹಾಲಿ ಶಾಸಕರಿಗಿಲ್ಲ ಟಿಕೆಟ್

‌ರಾಜ್ಯದಲ್ಲೂ ಗುಜರಾತ್‌ ಮಾಡೆಲ್: ಹಲವು ಬಿಜೆಪಿ ಹಾಲಿ ಶಾಸಕರಿಗಿಲ್ಲ ಟಿಕೆಟ್

ರಾಜ್ಯ ವಿಧಾನಸಭೆ ಚುನಾವಣೆಗೆ ಗುಜರಾತ್‌ ಮಾದರಿಯನ್ನು ಅನುಸರಿಸಲು ಬಿಜೆಪಿ ಮುಂದಾಗಿದ್ದು, ಬಿಜೆಪಿಯ 22 ಹಾಲಿ ಶಾಸಕರಿಗೆ ಟಿಕೆಟ್​​ ಸಿಗುವುದು ಬಹುತೇಕ ಅನುಮಾನ ಎಂದು ಹೇಳಲಾಗಿದೆ. ಈಗಾಗಲೇ 5ಕ್ಕೂ ಹೆಚ್ಚು ಹಿರಿಯ ನಾಯಕರಿಗೆ ಕ್ಷೇತ್ರವನ್ನು ಬಿಟ್ಟುಕೊಡುವಂತೆ ದೂರವಾಣಿ ಕರೆ ಮೂಲಕ ಸೂಚನೆ ಕೂಡಾ ಬಂದಿದೆ ಎನ್ನಲಾಗುತ್ತಿದೆ.

ತನಗೆ ಕರೆ ಬಂದಿದ್ದು ನಿಜ, ಹೊಸಬರಿಗೆ ಅವಕಾಶ ನೀಡುವಂತೆ ಕೋರಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡಾ ಸ್ಪಷ್ಟಪಡಿಸಿದ್ದಾರೆ.  ಇವರಲ್ಲದೆ, ಮಾಜಿ ಸಚಿವರಾದ ಎಸ್.ಸುರೇಶ್ ಕುಮಾರ್,  ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್.ಎ.ರಾಮದಾಸ್, ಬಿ.ಸಿ.ನಾಗೇಶ್ ಸೇರಿದಂತೆ ಹಲವು ಹಿರಿಯ ನಾಯಕರಿಗೆ ವರಿಷ್ಠರ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಟಿಕೆಟ್ ತಪ್ಪುವ ಸಾಧ್ಯತೆ ಇರುವ ಹಾಲಿ ಬಿಜೆಪಿ ಶಾಸಕರು

ನೆಹರು ಓಲೇಕಾರ್ – ಹಾವೇರಿ

ಎಸ್.ಎ. ರವೀಂದ್ರನಾಥ್- ದಾವಣಗೆರೆ ಉತ್ತರ

ಜಿ.ಹೆಚ್. ತಿಪ್ಪಾರೆಡ್ಡಿ- ಚಿತ್ರದುರ್ಗ

ಎಂ.ಪಿ. ಕುಮಾರಸ್ವಾಮಿ- ಮೂಡಿಗೆರೆ

ರವಿ ಸುಬ್ರಹ್ಮಣ್ಯ – ಬಸವನಗುಡಿ

ಬಿ.ಎಂ. ಸುಕುಮಾರ್ ಶೆಟ್ಟಿ- ಬೈಂದೂರು

ಹಾಲಾಡಿ ಶ್ರೀನಿವಾಸ ಶೆಟ್ಟಿ- ಕುಂದಾಪುರ

ವೆಂಕಟರೆಡ್ಡಿ ಮುದ್ನಾಳ್- ಯಾದಗಿರಿ

ಕಳಕಪ್ಪ ಬಂಡಿ- ರೋಣ

ಸೋಮಲಿಂಗಪ್ಪ- ಸಿರುಗುಪ್ಪ

ರಾಮಣ್ಣ ಲಮಾಣಿ- ಶಿರಹಟ್ಟಿ

ಸಂಜೀವ ಮಠಂದೂರು- ಪುತ್ತೂರು

ಲಾಲಾಜಿ ಮೆಂಡನ್- ಕಾಪು

ಸುನೀಲ್ ನಾಯ್ಕ್ – ಭಟ್ಕಳ

ಕೆ.ಎಸ್. ಈಶ್ವರಪ್ಪ – ಶಿವಮೊಗ್ಗ

ಎಸ್.ಎ. ರಾಮದಾಸ್ – ಕೃಷ್ಣರಾಜ

ಜಗದೀಶ್ ಶೆಟ್ಟರ್ – ಧಾರವಾಡ ಸೆಂಟ್ರಲ್

ವಿಶ್ವೇಶ್ವರ ಹೆಗಡೆ ಕಾಗೇರಿ – ಶಿರಸಿ

ಸುರೇಶ್ ಕುಮಾರ್ – ರಾಜಾಜಿನಗರ

ರಮೇಶ್​ ಜಾರಕಿಹೊಳಿ – ಗೋಕಾಕ್

ಸಿಎಂ ನಿಂಬಣ್ಣನವರ್‌ – ಕಲಘಟಗಿ

ಹೆಚ್ಚಿನ ಸುದ್ದಿ