Monday, March 2, 2026
Homeಚುನಾವಣೆ 2023ಬೆಂಗಳೂರಲ್ಲಿ ಬಂಡಾಯದ ಕಿಚ್ಚು : ರಾಜಿನಾಮೆಗೆ ಮುಂದಾದ ಕಾರ್ಯಕರ್ತರು

ಬೆಂಗಳೂರಲ್ಲಿ ಬಂಡಾಯದ ಕಿಚ್ಚು : ರಾಜಿನಾಮೆಗೆ ಮುಂದಾದ ಕಾರ್ಯಕರ್ತರು

ಬಿಜೆಪಿ ಮೊದಲನೇ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ರಾಜ್ಯಾದ್ಯಂತ ಬಂಡಾಯದ ಕಿಚ್ಚು ಹಬ್ಬಲಾರಂಭಿಸಿದೆ. ಟಿಕೆಟ್ ವಂಚಿತ ಮುಖಂಡರ ಬೆಂಬಲಿಗರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ. ರಾಜಧಾನಿ ಬೆಂಗಳೂರಿಗೂ ಸಾರ್ವಜನಿಕ ರಾಜೀನಾಮೆ ಬಿಸಿ ತಟ್ಟಿದೆ.

ಎನ್.ಆರ್ ರಮೇಶ್‌ಗೆ ಜಯನಗರ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಬರೋಬ್ಬರಿ 1250 ಕಾರ್ಯಕರ್ತರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಹಲವು ದಶಕಗಳಿಂದ ಬಿಜೆಪಿಯ ಸಂಘಟನೆಗೆ ಹಗಲಿರುಳು ಶ್ರಮಿಸುತ್ತಾ, ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರಗಳು ಮತ್ತು ಹಗರಣಗಳ ವಿರುದ್ಧ ತೊರೆದು ಹೋರಾಟ ನಡೆಸುತ್ತಾ ಬಂದಿರುವ ಎನ್.ಆರ್ ರಮೇಶ್ ಅವರುಗೆ 2018 ರ ಚುನಾವಣೆಯಲ್ಲಿ ಮಾಡಿದ ರೀತಿಯೇ 2023 ರ ಚುನಾವಣೆಯಲ್ಲಿ ಅನ್ಯಾಯ ಮಾಡಲಾಗಿದೆ.

ಈ ಸಲವಾದರೂ ಪಕ್ಷದ ವತಿಯಿಂದ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ನಿನ್ನೆ ಪಕ್ಷದ ವರಿಷ್ಠರು ಬಿಡುಗಡೆ ಮಾಡಿದ ಪಟ್ಟಿಯನ್ನು ನೋಡಿದಾಕ್ಷಣ ಆಘಾತವಾಗಿರುವ ಹಿನ್ನೆಲೆಯಲ್ಲಿ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್, ಕರೇಸಂದ್ರ ವಾರ್ಡ್ ಮತ್ತು ಗಣೇಶಮಂದಿರ ವಾರ್ಡಿನ 1,250ಕ್ಕೂ ಹೆಚ್ಚು ಮಂದಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆಯನ್ನು ನೀಡುತ್ತಿದ್ದೇವೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ

ಹೆಚ್ಚಿನ ಸುದ್ದಿ