ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಮಾಜಿ ಮೇಯರ್ ಗಂಗಾಂಬಿಕೆ ಹಾಗೂ ಕೆಜಿಎಫ್ ಬಾಬು ಇಬ್ಬರೂ ಒಟ್ಟೊಟ್ಟಿಗೆ ಸಹ ಗುರುವಾರ ನಾಮಪತ್ರ ಸಲ್ಲಿಸಸಲು ಬಂದಿದ್ದರು. ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿರುವ ಇವರು ಕಾಂಗ್ರೆಸ್ ತಮಗೆ ಬಿ ಫಾರಂ ನೀಡುವ ಭರವಸೆ ಇದೆ. ಆದರೆ ಇಂದು ಒಳ್ಳೆಯ ದಿನವಾದ್ದರಿಂದ ನಾಮಪತ್ರ ಸಲ್ಲಿಸಿದ್ದೇನೆ ಎಂದ್ರು.
ಜಯನಗರ ಎರಡನೇ ಬ್ಲಾಕ್‌ನಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲಿ ಇಬ್ಬರೂ ನಾಮಪತ್ರ ಸಲ್ಲಿಸಿ ಮಾದಯ್ಮಗಳೊಂದಿಗೆ ಮಾತನಾಡಿದರು. ಕಾಂಗ್ರೆಸ್ ಇದುವರೆಗೂ ಇಲ್ಲಿನ ಅಭ್ಯರ್ಥಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಬಿಜೆಪಿಯಿಂದ ಶಾಸಕ ಉದಯ್ ಗರುಡಾಚಾರ್ ಸ್ಪರ್ಧಿಸುತ್ತಿದ್ದಾರೆ. ಮಹಿಳೆಯರಿಗೆ ಕಾಂಗ್ರೆಸ್ ಪ್ರಾಶಸ್ತ್ಯ ಕೊಡಲಿದೆ ಎಂದು ಗಂಗಾಂಬಿಕೆ ಭರವಸೆ ವ್ಯಕ್ತಪಡಿಸಿದರೆ, ಪಕ್ಷವು ಗಂಗಾಂಬಿಕೆಯವರಿಗೆ ಟಿಕೆಟ್ ಕೊಟ್ಟರೆ ನಾನೂ ಸಹ ಅವರ ಪರವಾಗಿ ಪ್ರಚಾರ ನಡೆಸಲಿದ್ದೇನೆ ಎಂದು ಕೆಜಿಎಫ್ ಬಾಬು ಹೇಳಿದ್ರು.
ಇದೇ ವೇಳೆ ಕೆಜಿಎಫ್ ಬಾಬು ಪತ್ನಿ ಶಾಜಿಯಾ ತರನುಂ ಕೂಡ ಚಿಕ್ಕಪೇಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
