Wednesday, June 17, 2026
Homeಟಾಪ್ ನ್ಯೂಸ್ಬಿಎಸ್‌ವೈ ಆಪ್ತ ಬಗ್ಗೆ ಸೋಮಣ್ಣ ಇದೆಂತಾ ಮಾತು!

ಬಿಎಸ್‌ವೈ ಆಪ್ತ ಬಗ್ಗೆ ಸೋಮಣ್ಣ ಇದೆಂತಾ ಮಾತು!

ಚಾಮರಾಜನಗರ: ಶಾಸಕ ವಿ ಸೋಮಣ್ಣ ಮತ್ತು ಬಿಎಸ್ವೈ ಕಿತ್ತಾಟ ನಡುವೆ ಮೂಗು ತುರಿಸಿದ್ದ ಬಿಎಸ್ ವೈ ಆಪ್ತ ರುದ್ರೇಶ್ ಇದೀಗ ಮತ್ತೇ ಸುದ್ದಿಯಾಗಿದ್ದಾರೆ. ಚಾಮರಾಜನಗರ ಈಗಗಾಲೇ ಬಿಜೆಪಿಯಲ್ಲಿ ಬಂಡಾಯದ ಬಿಸಿ ಶುರುವಾಗಿದ್ದು. ರುದ್ರೇಶ್ ಶಾಸಕ ವಿ ಸೋಮಣ್ಣ ಮಾಡಿರುವ ಹಗರಣಗಳ ಬಗ್ಗೆ ಎಲ್ಲಾ ಗೊತ್ತು ಎಂದು ಹೇಳಿದ್ದರು. ಈ ವಿಚಾರಕ್ಕೆ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು. ಇದೆಲ್ಲ ಪಕ್ಷದ ಆಂತರಿಕ ವಿಚಾರ. ಅವನ್ಯಾವನೋ ನಾಯಿ ನರಿ ಕುರಿತು ಕೇಳ್ಬೇಡಿ, ನನ್ನ ಹತ್ರ ಮಾತಾಡ್ಬೇಕಾದರೆ ನನಗಿಂತ ಮೇಲ್ಪಟ್ಟವರು ಯಾರಾದರೂ ಏನಾದರೂ ಅಂದಿದ್ರೆ ಕೇಳಿ. ದಾರಿಲಿ ಹೋಗುವ ಯಾರದೋ ಕುರಿತು ಕೇಳ್ಬೇಡಿ ಎಂದು ಬಿಎಸ್‌ವೈ ಆಪ್ತ ರುದ್ರೇಶ್ ಕುರಿತು ವಿ ಸೋಮಣ್ಣ ವ್ಯಂಗ್ಯವಾಡಿದ್ದಾರೆ.

ಅಷ್ಟೇ ಅಲ್ಲದೇ, ಚಾಮರಾಜನಗರ ಜಿಲ್ಲೆಯಾಗಿ 25 ವರ್ಷಗಳು ಕಳೆದಿವೆ. ಇಲ್ಲಿ ಅನೇಕ ಕೆಲಸಗಳು ಇನ್ನೂ ಇಲ್ಲಿ ಆಗಬೇಕಿದೆ. ಇಲ್ಲಿಗೆ ನಾನು ಬಂದಿಲ್ಲ ವರಿಷ್ಠರು ಸೂಚನೆ ಕೊಟ್ಟಿದಾರೆ. ಮಲೆಮಾದೇಶ್ವರ, ವರುಣ ಕ್ಷೇತ್ರಕ್ಕೆ ತಾಯಿ ಚಾಮುಂಡೇಶ್ವರಿ ಕರೆಸಿಕೊಂಡಿದ್ದಾರೆ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ