Monday, March 2, 2026
Homeಟಾಪ್ ನ್ಯೂಸ್ದೆಹಲಿಯ ಇಂಧನ ಸಬ್ಸಿಡಿ ಇವತ್ತಿಗೆ ಕೊನೆ: ಲೆಫ್ಟಿನೆಂಟ್ ಗವರ್ನರ್ ಕಾರಣ ಎಂದ ಆಪ್

ದೆಹಲಿಯ ಇಂಧನ ಸಬ್ಸಿಡಿ ಇವತ್ತಿಗೆ ಕೊನೆ: ಲೆಫ್ಟಿನೆಂಟ್ ಗವರ್ನರ್ ಕಾರಣ ಎಂದ ಆಪ್

ನವದೆಹಲಿ: ಸುಮಾರು 46 ಲಕ್ಷ ಕುಟುಂಬಗಳಿಗೆ ದಿಲ್ಲಿ ಸರಕಾರ ನೀಡುತ್ತಿದ್ದ ಇಂಧನ ಸಬ್ಸಿಡಿ ಶುಕ್ರವಾರದಿಂದ ಕೊನೆಯಾಗಲಿದೆ ಎಂದು ದಿಲ್ಲಿ ಸರಕಾರ ತಿಳಿಸಿದೆ.

ಗ್ರಾಹಕರಿಗೆ ಸಬ್ಸಿಡಿಯನ್ನು ಮುಂದುವರಿಸುವ ಪ್ರಸ್ತಾವಕ್ಕೆ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಇನ್ನೂ ಒಪ್ಪಿಗೆ ನೀಡದೇ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದಿಲ್ಲಿ ಸರಕಾರ ಹೇಳಿದೆ.

“ಗ್ರಾಹಕರಿಗೆ ನೀಡುತ್ತಿದ್ದ ಸಬ್ಸಿಡಿ ಯನ್ನು ಮುಂದುವರಿಸಲು ಆಪ್ ಸರಕಾರ ಈಗಾಗಲೇ ನಿರ್ಧರಿಸಿದೆ. ಆದರೆ ಲಿಫ್ಟಿನೆಂಟ್ ಗವರ್ನರ್ ಅವರು ಇನ್ನೂ ಫೈಲ್ ಗೆ ಒಪ್ಪಿಗೆ ನೀಡಿಲ್ಲ” ಎಂದು ಇಂಧನ ಸಚಿವೆ ಅತಿಥಿ ಹೇಳಿದ್ದಾರೆ.

“ಇದೇ ವಿಚಾರಕ್ಕೆ ಸಂಬಂಧಿಸಿದ ಸಕ್ಸೇನ ಜೊತೆಗೆ ಮಾತುಕತೆಗೆ ನಾನು ಐದು ನಿಮಿಷಗಳ ಕಾಲಾವಕಾಶ ಕೇಳಿದ್ದೆ. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ” ಎಂದವರು ಆರೋಪಿಸಿದ್ದಾರೆ

ಹೆಚ್ಚಿನ ಸುದ್ದಿ