ಬೆಂಗಳೂರು: ಕಾಂಗ್ರೆಸ್ ನ ನೂತನ ಕಟ್ಟಡ ಇಂಗಿರಾಗಾಂಧಿ ಭವನ ಹಾಗೂ ಭಾರತ್ ಜೋಡೋ ಸಭಾಂಗಣವನ್ನು ರಾಹುಲ್ ಗಾಂಧಿ ಲೋಕಾರ್ಪಣೆಗೊಳಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ನೂತನ ಕಟ್ಟಡ ಇಂದಿರಾ ಗಾಂಧಿ ಭವನ ಉದ್ಘಾಟನೆ ಮಾಡಿದರು.

ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ರಾಜ್ಯದಲ್ಲಿ ಬಿಜೆಪಿ ಏನು ಮಾಡುತ್ತಿದೆ ಅಂತ ಎಲ್ಲರೂ ನೋಡ್ತಿದ್ದೀರಿ.. ನಾವೀಗ ಕರ್ನಾಟಕದಲ್ಲಿ ಚುನಾವಣೆ ಎದುರಿಸ್ತಿದ್ದೀವಿ. ಈ ಚುನಾವಣೆ ಗೆಲ್ಲುವ ವಿಶ್ವಾಸ ನನಗಿದೆ. ಪಕ್ಷದಲ್ಲಿ ಎಲ್ಲರೂ ಒಟ್ಟಾಗಿ ಇದ್ದಾರೆ ಅನ್ನೋದು ನನಗೆ ಭಾರತ್ ಜೋಡೋ ಯಾತ್ರೆಯಲ್ಲಿ ಸ್ಪಷ್ಟವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿತ್ತು. 40 ಪರ್ಸೆಟ್ ಸರ್ಕಾರ ಅಂತ ಜನರು ಮಾತಾಡ್ತಿದ್ದಾರೆ.. ಚುನಾವಣಾ ಸಮಯದಲ್ಲಿ ನಾನು ಸಮಯ ಮತ್ತು ಸಹಕಾರ ಕೊಡ್ತೀನಿ ಎಂದರು.
ಬಿಜೆಪಿ ದೇಶಕ್ಕೆ ಏನು ಮಾಡ್ತಿದೆ ಅಂತ ನಿಮ್ಗೆ ಗೊತ್ತಿದೆ. ನಾವು ದೇಶವನ್ನ ರಕ್ಷಣೆ ಮಾಡಬೇಕಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಪ್ರಧಾನಿ ಮೋದಿ ಏನೇ ಹೇಳಿದ್ರು ಭ್ರಷ್ಟಾಚಾರ ಕಡಿಮೆ ಆಗಿಲ್ಲ. ರಾಜ್ಯದಲ್ಲಿ ಜನರ ಮಾತು ಕೇಳುವ ಸರ್ಕಾರವನ್ನ ನಾವು ನೀಡುತ್ತವೆ ಎಂದರು.
