Saturday, June 6, 2026
Homeದೇಶಅಜಿತ್ ಪವಾರ್ ಬಿಜೆಪಿ ಸೇರಿದರೆ ಮೈತ್ರಿ ಮುರಿಯುತ್ತೇವೆ: ಶಿಂಧೆ ಬಣದ ಎಚ್ಚರಿಕೆ

ಅಜಿತ್ ಪವಾರ್ ಬಿಜೆಪಿ ಸೇರಿದರೆ ಮೈತ್ರಿ ಮುರಿಯುತ್ತೇವೆ: ಶಿಂಧೆ ಬಣದ ಎಚ್ಚರಿಕೆ

 

ನವದೆಹಲಿ: ಎನ್‌ಸಿಪಿ ನಾಯಕ ಅಜಿತ್ ಪವಾರ್ ಬಿಜೆಪಿ ಸೇರಿದರೆ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರದ ಭಾಗವಾಗುವುದಿಲ್ಲ ಎಂದು ಶಿವಸೇನೆ ವಕ್ತಾರ ಸಂಜಯ್ ಶಿರ್ಸಾತ್ ಎಚ್ಚರಿಕೆ ನೀಡಿದ್ದಾರೆ.

ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎನ್‌ಸಿಪಿ ದ್ರೋಹ ಎಸಗುವ ಪಕ್ಷವಾಗಿದೆ. ನಾವು ಅಧಿಕಾರದಲ್ಲಿದ್ದರೂ ಎನ್‌ಸಿಪಿಯೊಂದಿಗೆ ಇರುವುದಿಲ್ಲ. ಏಕೆಂದರೆ ನಾವು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಹೋಗುವುದನ್ನು ಜನರು ಇಷ್ಟಪಡುವುದಿಲ್ಲ’’ ಎಂದವರು ಹೇಳಿದ್ದಾರೆ.

ಅಜಿತ್ ಪವಾರ್ ಅವರ ಅಸಮಾಧಾನಕ್ಕೆ ಕಾರಣ ಅವರ ಪುತ್ರ ಪಾರ್ಥ್ ಪವಾರ್ ಈ ಹಿಂದೆ ಚುನಾವಣೆಯಲ್ಲಿ ಸೋತಿರುವುದು ಎಂದವರು ಹೇಳಿದ್ದಾರೆ.

ಹೆಚ್ಚಿನ ಸುದ್ದಿ