ಕಳೆದ 24 ಗಂಟೆಗಳಲ್ಲಿ ದೇಶದ ವಿವಿದೆಡೆ ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಕೋವಿಡ್-19 ಸೋಂಕಿನ ್ರಮಾಣ ಹೆಚ್ಚಾಗುತ್ತಿದ್ದ, ಒಂದೇ ದಿನ 12,591 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ. ಒಟ್ಟು 8 ರಾಜ್ಯಗಳಲ್ಲಿ ಕೊರೊನಾ ಏರಿಕೆ ಆಗಿದ್ದು, ಪ್ರಧಾನಮಂತ್ರಿ ಕಾರ್ಯಾಲಯವು ಸಭೆ ನಡೆಸಿ ಕೈಗೊಂಡ ಕ್ರಮಗಳ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ.
ನಿನ್ನೆ ಅಂದರೆ ಏ.19ರಂದು ಬುಧವಾರ 10,542 ಪ್ರಕರಣ ದಾಖಲಾಗಿದ್ದು, ಇಂದುಮತ್ತೆ ಕೋವಿಡ್ ಪ್ರಕರಣಗಳು ಗಮನಾರ್ಹವಾಗಿ ಏರಿಕೆ ಕಂಡಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ. ಇನ್ನೊಂದೆಡೆ 10,827 ಮಂದಿ ಗುಣಮುಖರಾಗಿದ್ದಾರೆ. ಅದರಿಂದ ಸೋಂಕಿನಿಂದ ಇದುವರೆಗಿನ ಗುಣಮುಖರಾದವರ ಸಂಖ್ಯೆ 4,42,61,476 ಆಗಿದೆ.
ಕರ್ನಾಟಕ ಸೇರಿದಂತೆ ಕೇರಳ, ದೆಹಲಿ, ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಕೊರೊನಾ ತ್ವರಿತವಾಗಿ ಹೆಚ್ಚಾಗಿದೆ. ಇದರಿಂದ ಪಾಸಿಟಿವಿಟಿ ಸಹ ದಿನದಿಂದ ದಿನಕ್ಕೆಏರಿಕೆ ಆಗುತ್ತಿದೆ.
ದೇಶಾದ್ಯಂತ ಕೋವಿಡ್ ಹೆಚ್ಚುತ್ತಿದ್ದರಿಂದ ಪರಿಸ್ಥಿತಿ ನಿರ್ವಹಣೆ ಕುರಿತು ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ಉನ್ನತ ಮಟ್ಟದ ಸಭೆ ನಡೆಸಿ, ಇದರಲ್ಲಿ ಆರೋಗ್ಯ ಮೂಲ ಸೌಲಭ್ಯಗಳು, ಔಷಧಿಗಳು, ಲಸಿಕೆ ಅಭಿಯಾನದ ಸನ್ನದ್ಧತೆ, ಕೋವಿಡ್ ಪ್ರಕರಣಗಳ ಇತ್ತೀಚಿನ ಏರಿಕೆ ಹಾಗೂ ಕೈಗೊಳ್ಳಬಹುದಾದ ಅಗತ್ಯ ಕ್ರಮ ಕುರಿತು ತಜ್ಞರ ಜೊತೆಗೆ ಅವರು ಚರ್ಚಿಸಿದರು. ಜೊತೆಗೆ ಅದರಲ್ಲಿ ‘ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಷನ್ ಮತ್ತು ಅನುಸರಣೆ’ ಈ ಐದು ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಮುಂದುವರೆಸಬೇಕು. ಜೊತೆಗೆ ಕೋವಿಡ್ ಹೆಚ್ಚಳದ ಕುರಿತು ಸ್ಥಳಿಯ ಆರೋಗ್ಯ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದೆ.
