Monday, March 2, 2026
Homeಟಾಪ್ ನ್ಯೂಸ್ಬಿಎಲ್ ಸಂತೋಷ್ ಬಗ್ಗೆ ಮಾತಾಡೋದು ಪಾಪದ ಕೆಲಸ: ಅರುಣ್‌ ಸಿಂಗ್

ಬಿಎಲ್ ಸಂತೋಷ್ ಬಗ್ಗೆ ಮಾತಾಡೋದು ಪಾಪದ ಕೆಲಸ: ಅರುಣ್‌ ಸಿಂಗ್

ಬೆಳಗಾವಿ: ತನಗೆ ಟಿಕೆಟ್‌ ತಪ್ಪಲು ಬಿಎಲ್‌ ಸಂತೋಷ್‌ ಕಾರಣ ಎಂದು ಜಗದೀಶ್‌ ಶೆಟ್ಟರ್‌ ಮಾಡಿರುವ ಆರೋಪಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಎಲ್ ಸಂತೋಷ್ ಮನೆ, ಮಠ ಬಿಟ್ಟು ಪಕ್ಷ ಹಾಗೂ ರಾಷ್ಟ್ರಸೇವೆ ಮಾಡುತ್ತಿದ್ದಾರೆ. ಅವರ ಬಗ್ಗೆ ಈ ರೀತಿ ಮಾತಾಡುತ್ತಿರುವುದು ಪಾಪದ ಕೆಲಸ ಎಂದು ಅರುಣ್‌ ಸಿಂಗ್‌ ಹೇಳೀದ್ದಾರೆ.

ಪಕ್ಷ ತೊರೆದಾಗ ಸಹಜವಾಗಿ ಹೀಗೆ ಆರೋಪ ಮಾಡುತ್ತಾರೆ. ಪಕ್ಷ ಬಿಟ್ಟು ಹೋದ ಮೇಲೆ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಒಂದು ವೇಳೆ ಆ ರೀತಿ ಇದ್ದರೆ ಪಕ್ಷದಲ್ಲಿ ಇದ್ದಾಗಲೇ ಹೇಳಬೇಕಿತ್ತು ಎಂದು ಅವರು ಹೇಳಿದ್ದಾರೆ

ಜಗದೀಶ್ ಶೆಟ್ಟರ್ ಹಲವು ವರ್ಷಗಳ ಕಾಲ ಪಕ್ಷದಲ್ಲಿ ಇದ್ದವರು. ಹೀಗಾಗಿ ಶೆಟ್ಟರ್ ಬಗ್ಗೆ ನಾನು ಏನೂ ಮಾತಾಡಲ್ಲ. ಕಾಂಗ್ರೆಸ್ ಕೇವಲ 9 ತಿಂಗಳು ಲಿಂಗಾಯತರನ್ನು ಸಿಎಂ ಮಾಡಿತ್ತು. ವೀರೇಂದ್ರ ಪಾಟೀಲ್‌ರಿಗೆ ಯಾವ ರೀತಿ ಅಪಮಾನ ಮಾಡಿತ್ತು. ಕಾಂಗ್ರೆಸ್‌ ಜಾತಿ, ಧರ್ಮ ಒಡೆದು ಜಗಳ ಹಚ್ಚಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಹೆಚ್ಚಿನ ಸುದ್ದಿ