
ಕುಷ್ಟಗಿ ಜು.14: ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಉಚಿತ ಬಸ್ ಪ್ರಯಾಣಿಸುವ ಶಕ್ತಿ ಯೋಜನೆಯ ಹೊಸ ಮೈಲಿಗಲ್ಲು ತಲುಪಿದೆ. 500 ಕೋಟಿ ಮಹಿಳಾ ಪ್ರಯಾಣಿಕರು ಸಂಚರಿಸಿ ಹೊಸ ದಾಖಲೆ ತಲುಪಿದೆ. ಆ ಹಿನ್ನೆಲೆಯಲ್ಲಿ ಸೋಮವಾರ ಕುಷ್ಟಗಿ ಕಲ್ಯಾಣಕರ್ನಾಟಕ ನಿಲ್ದಾಣದಲ್ಲಿ ಬಸ್‌ಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಮಹಿಳಾ ಪ್ರಯಾಣಿಕರಿಗೆ ಸಿಹಿ ಮತ್ತು ಹೂ ಹಂಚಲಾಯಿತು.

ಈ ಸಂದರ್ಭ ತುಂಗಭದ್ರಾ ಅಚ್ಚುಕಟ್ಟ ಕಾಡಾ ಅಧ್ಯಕ್ಷರಾದ ಹಸನಸಾಬ ದೋಟಿಹಾಳ ಮಾತನಾಡಿ, ಮಹಿಳಾ ಸ್ವಾವಲಂಬನೆ ಮತ್ತು ನಾರಿ ಶಕ್ತಿಯನ್ನು ಎತ್ತಿ ಹಿಡಿಯುವಲ್ಲಿ ಶಕ್ತಿ ಯೋಜನೆಯು ಜಗತ್ತಿನ ಮಾದರಿ ಯೋಜನೆಯಾಗಿದೆ ಎಂದು ಹೇಳಿದರು ಕೊಪ್ಪಳ ಜಿಲ್ಲೆಯ ದಿಶಾ ಸಮಿತಿಯಸದಸ್ಯರಾದ ದೊಡ್ಡಬಸನಗೌಡಪಾಟೀಲಬಯ್ಯಾಪೂರ.ತಾಲೂಕಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಪಂಪಾಪತಿ. ಡೀಪೂ ಮ್ಯಾನೇಜರ ಸುಂದರಗೌಡ. ಗ್ಯಾರಂಟಿಯೋಜನೆಯ ಸದಸ್ಯರು ತಾಲೂಕಪಂಚಾಯಿತಿಯ ಸಿಬ್ಬಂದಿಯವರು ಕುಷ್ಟಗಿ ಡೀಪೂ ಸಿಬ್ಬಂದಿಯವರು ಇದ್ದರು
ವರದಿ: ಯಮನೂರಪ್ಪ ಆರ್ ಅಬ್ಬಿಗೇರಿ
