Wednesday, June 17, 2026
Homeಚುನಾವಣೆ 2023ಮಂಡ್ಯದಲ್ಲಿ ಬಿಜೆಪಿ ಪರ ಅಂಭಿಷೇಕ್ ಅಂಬರೀಶ್ ಪ್ರಚಾರ!

ಮಂಡ್ಯದಲ್ಲಿ ಬಿಜೆಪಿ ಪರ ಅಂಭಿಷೇಕ್ ಅಂಬರೀಶ್ ಪ್ರಚಾರ!

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ದಿನೆ ದಿನೇ ರಂಗೇರುತ್ತಿದೆ. ರಾಜಕೀಯ ಪಕ್ಷಗಳ ಪರ ಸೆಲೆಬ್ರಿಟಿಗಳು ಪ್ರಚಾರಕ್ಕೆ ಸಜ್ಜಾಗಿದ್ದು, ನಟ ಅಭಿ‌ಷೇಕ್ ಅಂಬರೀಶ್ ಮಂಡ್ಯದಲ್ಲಿ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ.

ಈಗಾಗಲೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಹೇಳಿದ್ದು, ಇದೀಗ ಸಕ್ಕರೆ ನಾಡಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಅಭಿಷೇಕ್ ಅಂಬರೀಶ್ ಪ್ರಚಾರ ಮಾಡಲಿದ್ದಾರೆ. ನಾಮಿನೇಷನ್ ನಂತ್ರ ಪ್ರಚಾರಕ್ಕೆ ತೆರಳಲಿದ್ದಾರೆ . ಏಳು ಕ್ಷೇತ್ರದಲ್ಲೂ ಪ್ರಚಾರ ಮಾಡಲಿದ್ದಾರೆ. ಮುಖ್ಯವಾಗಿ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ್ಣದಲ್ಲಿ ಅಬ್ಬರದ ಪ್ರಚಾರ ಮಾಡಲಿದ್ದಾರೆ. ಇಂಡವಾಳು ಸಚ್ಚಿದಾನಂದ, ಅಶೋಕ್ ಜಯರಾಂ , ಎಸ್.ಪಿ.ಸ್ವಾಮಿ ಪರ ಪ್ರಚಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚಿನ ಸುದ್ದಿ