ಲಕ್ನೋ: ಒಂದು ವೇಳೆ ತನ್ನ ಹತ್ಯೆಯಾದರೆ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಮತ್ತು ಭಾರತದ ಮುಖ್ಯ ನ್ಯಾಯಾಧೀಶರಿಗೆ ನೀಡಲು ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಪತ್ರವೊಂದನ್ನು ಬರೆದಿದ್ದ ಎಂದು ಆತನ ವಕೀಲರು ಹೇಳಿಕೆ ನೀಡಿದ್ದಾರೆ.
“ಮುಚ್ಚಿದ ಲಕೋಟೆಯಲ್ಲಿರುವ ಆ ಪತ್ರ ಸದ್ಯ ನನ್ನ ಬಳಿ ಇಲ್ಲ ಅಥವಾ ನಾನು ಯಾರಿಗೂ ಕಳುಹಿಸಿಲ್ಲ. ಅದನ್ನು ಬೇರೆಲ್ಲೋ ಇದ್ದು, ಬೇರೆ ಯಾರೋ ಕಳಿಸಿದ್ದಾರೆ’’ ಎಂದು ಅತೀಕ್ ಪರ ವಕೀಲ ವಿಜಯ್ ಮಿಶ್ರಾ ಹೇಳಿದರು.
ಯಾವುದೇ ದುರ್ಘಟನೆ ಸಂಭವಿಸಿದಲ್ಲಿ ಅಥವಾ ತನ್ನ ಹತ್ಯೆಯಾದಲ್ಲಿ ಮುಚ್ಚಿದ ಲಕೋಟೆಯಲ್ಲಿರುವ ಪತ್ರವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳಿಗೆ ಕಳುಹಿಸಬೇಕು ಎಂದು ಅತೀಕ್ ಅಹ್ಮದ್ ಹೇಳಿದ್ದ ಎಂದು ಮಿಶ್ರಾ ತಿಳಿಸಿದ್ದಾರೆ.
