Sunday, May 3, 2026
Homeಚುನಾವಣೆ 2023ಬಿಜೆಪಿ ಪಟ್ಟಿಯಲ್ಲಿ ಬೆಂಗಳೂರಿನ 25 ಕ್ಷೇತ್ರಗಳ ಅಭ್ಯರ್ಥಿ ಪ್ರಕಟ

ಬಿಜೆಪಿ ಪಟ್ಟಿಯಲ್ಲಿ ಬೆಂಗಳೂರಿನ 25 ಕ್ಷೇತ್ರಗಳ ಅಭ್ಯರ್ಥಿ ಪ್ರಕಟ

ಬೆಂಗಳೂರು: ಬಹು ನಿರೀಕ್ಷಿತ ಬಿಜೆಪಿ ಮೊದಲ ಪಟ್ಟಿ ಮಂಗಳವಾರ ತಡರಾತ್ರಿ ಹೊರಬಿದ್ದಿದೆ. ಗಜಪ್ರಸವದಂತೆ ವಿಳಂಬವಾಗಿದ್ದ 189 ಮಂದಿಯ ಈ ಪಟ್ಟಿಯಲ್ಲಿ ರಾಜಧಾನಿಯ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಯಲಹಂಕ ಎಸ್.ಆರ್. ವಿಶ್ವನಾಥ್, ಕೆಆರ್ ಪುರ- ಬಿ.ಎ.ಬಸವರಾಜ್, ಬ್ಯಾಟರಾಯನಪುರ- ತಮ್ಮೇಶ್ ಗೌಡ, ಯಶವಂತಪುರ-ಎಸ್ ಟಿ ಸೋಮಶೇಖರ್, ರಾಜರಾಜೇಶ್ವರಿ ನಗರ- ಮುನಿರತ್ನ ನಾಯ್ಡು, ದಾಸರಹಳ್ಳಿ- ಎಸ್ ಮುನಿರಾಜು, ಮಹಾಲಕ್ಷ್ಮಿ ಲೇಔಟ್ – ಗೋಪಾಲಯ್ಯ, ಮಲ್ಲೇಶ್ವರ- ಸಿ.ಎನ್. ಅಶ್ವತ್ಥ್ ನಾರಾಯಣ್, ಪುಲಕೇಶಿನಗರ- ಮುರಳಿ ಸ್ಥಾನ ಗಿಟ್ಟಿಸಿದ್ದಾರೆ.

ಇನ್ನು ಸರ್ವಜ್ಞ ನಗರ- ಪದ್ಮನಾಭರೆಡ್ಡಿ, ಸಿವಿರಾಮನ್ ನಗರ- ಎಸ್ ರಘು, ಶಿವಾಜಿನಗರ- ಎನ್ ಚಂದ್ರ, ಶಾಂತಿನಗರ- ಶಿವಕುಮಾರ್, ಗಾಂಧಿನಗರ- ಸಪ್ತಗಿರಿಗೌಡ, ರಾಜಾಜಿನಗರ- ಸುರೇಶ್ ಕುಮಾರ್, ವಿಜಯನಗರ- ರವೀಂದ್ರ ಎಚ್, ಚಾಮರಾಜಪೇಟೆ- ಭಾಸ್ಕರ್ ರಾವ್, ಚಿಕ್ಕಪೇಟೆ- ಉದಯ್ ಗರುಡಾಚಾರ್, ಬಸವನಗುಡಿ- ರವಿಸುಬ್ರಹ್ಮಣ್ಯ, ಪದ್ಮನಾಭನಗರ- ಆರ್ ಅಶೋಕ್, ಬಿಟಿಎಂ ಲೇಔಟ್ – ಶ್ರೀಧರ್ ರೆಡ್ಡಿ, ಜಯನಗರ- ಸಿಕೆ ರಾಮಮೂರ್ತಿ, ಬೊಮ್ಮನಹಳ್ಳಿ- ಸತೀಶ್ ರೆಡ್ಡಿ, ಬೆಂಗಳೂರು ದಕ್ಷಿಣ- ಎಂ ಕೃಷ್ಣಪ್ಪ, ಆನೇಕಲ್ – ಹುಲ್ಲಳ್ಳಿ ಶ್ರೀನಿವಾಸ್ ಸ್ಥಾನ ಪಡೆದಿದ್ದಾರೆ.

ಗೋವಿಂದರಾಜ ನಗರ, ಹೆಬ್ಬಾಳ ಹಾಗೂ ಮಹದೇವಪುರ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ಗೋವಿಂದರಾಜನಗರ ಶಾಸಕ ವಿ.ಸೋಮಣ್ಣನವರಿಗೆ ಈಗಾಗಲೇ ವರುಣಾ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ. ಪ್ರಸ್ತುತ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಹೆಸರು ಮೊದಲ ಪಟ್ಟಿಯಲ್ಲಿ ಹೊರಬಿದ್ದಿಲ್ಲ.

ಹೆಚ್ಚಿನ ಸುದ್ದಿ