ಬೆಂಗಳೂರು: ಬಿಜೆಪಿ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ವರ್ಚಸ್ಸು ಹಾಗೂ ಸಾಮರ್ಥ್ಯದ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಸಿದ ಬಿಜೆಪಿ ಮೊದಲ ಹಂತದಲ್ಲಿ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ
ಈ ಬಾರಿ 52 ಹೊಸಮುಖಗಳಿಗೆ ಅವಕಾಶ ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. 32 ಒಬಿಸಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದ್ದು, 30 ಎಸ್‌ಸಿ ಹಾಗೂ 16 ಎಸ್‌ಟಿ ಅಭ್ಯರ್ಥಿಗೆಳಿಗೆ ಮತ್ತು 8 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.
ನಿವೃತ್ತ ಐಎಎಸ್ ಅಧಿಕಾರಿ 1, ನಿವೃತ್ತ ಐಪಿಎಸ್ 1 ಅಧಿಕಾರಿ ಒಬ್ಬರಿಗೆ ಟಿಕೆಟ್ ನೀಡಿದ್ದು, 3 ಮಂದಿ ನಿವೃತ್ತ ಸರ್ಕಾರಿ ಅಧಿಕಾರಿಗಳಿಗೆ ಕೂಡಾ ಬಿಜೆಪಿ ಟಿಕೆಟ್ ನೀಡಿದೆ. ಅರುಣ್ ಸಿಂಗ್ ಪ್ರಕಾರ 8 ಮಂದಿ ಸಾಮಾಜಿಕ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಅವರು ಶಿಗ್ಗಾಂವಿನಿಂದ ಸ್ಪರ್ಧಿಸಲಿದ್ದಾರೆ.
ಹೊಸ ಮುಖಗಳು – 52
ಒಬಿಸಿ ಅಭ್ಯರ್ಥಿಗಳು – 32
ಎಸ್‌ಟಿ ಅಭ್ಯರ್ಥಿಗಳು – 16
ನಿವೃತ್ತ ಐಎಎಸ್ – 1
ನಿವೃತ್ತ ಐಪಿಎಸ್ – 1
ನಿವೃತ್ತ ಸರ್ಕಾರಿ ಅಧಿಕಾರಿಗಳು- 3
ಸಾಮಾಜಿಕ ಕಾರ್ಯಕರ್ತರು – 8
ವೈದ್ಯರು – 9
