ತರೀಕೆರೆ ತಾಲೂಕಿನ ಶಿವನಿ ಗ್ರಾಮದ ಬಿಎಸ್ಎನ್ಎಲ್ ಟವರ್ ಮೇಲೆ ಹತ್ತಿ ಬಿಜೆಪಿ ಕಾರ್ಯಕರ್ತ ರಂಗಪ್ಪ ಬೋವಿ ತನಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕು ಎಂದು ಹೈಡ್ರಾಮಾ ಮಾಡಿದ್ದಾನೆ. ಟವರ್ ಮೇಲೆ ಕುಳಿತೇ ರಂಗಪ್ಪ ಬೋವಿ ಆತ್ಮಹತ್ಯೆಯ ಬೆದರಿಕೆ ಹಾಕಿದ್ದಾನೆ.
ಈತ ಅಜ್ಜಂಪುರ ತರೀಕೆರೆ ವಿಧಾನಸಭಾ ವ್ಯಾಪ್ತಿಗೆ ಒಳಪಟ್ಟಿದ್ದು,ಇಲ್ಲಿ ಬಿಜೆಪಿಯಿಂದ ಈಗಾಗಲೇ ಡಿ.ಎಸ್ ಸುರೇಶ್ ಕಣಕ್ಕಿಳಿದಿದ್ದಾರೆ. ಈ ನಡುವೆ ರಂಗಪ್ಪ, ನನಗೆ ಬಿಜೆಪಿ ಟಿಕೆಟ್ ಬೇಕೇ ಬೇಕು ಅಂತ ಪಟ್ಟು ಹಿಡಿದು ಮೊಬೈಲ್ ಟವರ್ ಏರಿದ್ದಾನೆ.
ಮಾಹಿತಿ ತಿಳಿಯುತ್ತಿದ್ದಂತೆ ಅಜ್ಜಂಪುರ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ರಂಗಪ್ಪನ ಮನವೊಲಿಸಲು ಪ್ರಯತ್ನಿಸಿದ್ದರೂ ಕೂಡಾ ರಂಗಪ್ಪ ಬೋವಿ ಸ್ಥಳೀಯರು ಹಾಗೂ ಪೊಲೀಸರ ಮಾತಿಗೂ ಬಗ್ಗದೆ ಟವರ್ ಮೇಲೆ ಕುಳಿತಿರುವುದು ಸ್ಥಳೀಯರು ಹಾಗೂ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ.
