Saturday, June 6, 2026
Homeದೇಶಈದ್ ದಿನ ಮುಸ್ಲಿಮರ ಮನೆಗೆ ತೆರಳಿ ಶುಭಾಶಯ ಕೋರಲಿರುವ ಬಿಜೆಪಿ ಕಾರ್ಯಕರ್ತರು

ಈದ್ ದಿನ ಮುಸ್ಲಿಮರ ಮನೆಗೆ ತೆರಳಿ ಶುಭಾಶಯ ಕೋರಲಿರುವ ಬಿಜೆಪಿ ಕಾರ್ಯಕರ್ತರು

ಕೊಚ್ಚಿ: ಮುಂದಿನ ವಾರ ಈದ್ ಸಂದರ್ಭದಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳಲು ಮುಸ್ಲಮರ ಮನೆಗೆ ಕೇರಳದ ಬಿಜೆಪಿ ಕಾರ್ಯಕರ್ತರು ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ಬಿಜೆಪಿ ಈಸ್ಟರ್ ಸಂದರ್ಭದಲ್ಲಿ ಕ್ರೈಸ್ತರ ಮನೆಗೆ ಭೇಟಿ ನೀಡುವ ‘ಸ್ನೇಹ ಯಾತ್ರೆ’ ನಡೆಸಿತ್ತು.

ಕೊಚ್ಚಿಯಲ್ಲಿ ಬುಧವಾರ ನಡೆದ ಬಿಜೆಪಿಯ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಈದ್ ಸಂದರ್ಭದಲ್ಲಿ ಮುಸ್ಲಿಮರ ಮನೆಗೆ ತೆರಳಿ ಶುಭಾಶಯ ತಿಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯ ಕೇರಳ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರು ಈಸ್ಟರ್ ಹಬ್ಬದ ಸಂದರ್ಭ ಕ್ರೈಸ್ತರ ಮನೆಗೆ ತೆರಳಿ ಶುಭಾಶಯ ಕೋರಿದ್ದಕ್ಕಾಗಿ ಪಕ್ಷದ ರಾಜ್ಯ ಘಟಕವನ್ನು ಅಭಿನಂದಿಸಿದ್ದರು.

ಹೆಚ್ಚಿನ ಸುದ್ದಿ