ರಾಯಚೂರು: ನಾನು ಇದುವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಬಿಜೆಪಿಗೆ ಹೋಗುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ್ ಹೇಳಿದ್ದಾರೆ. ಮಾನ್ವಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಮುನ್ನ ಪಕ್ಷ ನನ್ನನ್ನು ಪರಿಗಣಿಸಬೇಕಿತ್ತು ಎಂದಿರುವ ಬಿ.ವಿ.ನಾಯಕ್, ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಗುಂಪುಗಾರಿಕೆ ಎಲ್ಲಾ ಪಕ್ಷದಲ್ಲಿಯೂ ಇದೆ. ನಮ್ಮಲ್ಲೂ ಹತ್ತಾರು ಮಂದಿ ಆಕಾಂಕ್ಷಿಗಳಿದ್ದು, ಅದಕ್ಕೆ ನಾವು ಬಲಿಯಾಗಿದ್ದೇವೆ. ಬೇರೆಬೇರೆ ಕಾರಣಗಳಿಂದ ನನಗೆ ಟಿಕೆಟ್ ನೀಡುವುದನ್ನು ನಿರಾಕರಿಸಲಾಗಿದೆ. ಇದುವರೆಗೂ ಬಿಜೆಪಿ ಸೇರ್ಪಡೆಯಾಗುವ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ನುಡಿದಿರುವ ಬಿ.ವಿ.ನಾಯಕ್, ಪಕ್ಷದಲ್ಲಿ ಇದ್ದಮೇಲೆ ಪಕ್ಷದ ತೀರ್ಮಾನವನ್ನು ಒಪ್ಪಬೇಕಾಗುತ್ತದೆ ಎಂದಿದ್ದಾರೆ.
