Wednesday, June 17, 2026
Homeಚುನಾವಣೆ 2023ಹಿರಿಯರಿಗೆ ಕೈ ತಪ್ಪಿದ ಟಿಕೆಟ್:‌ ವಿಜಯೇಂದ್ರ ಸಮರ್ಥನೆ

ಹಿರಿಯರಿಗೆ ಕೈ ತಪ್ಪಿದ ಟಿಕೆಟ್:‌ ವಿಜಯೇಂದ್ರ ಸಮರ್ಥನೆ

ಹಾವೇರಿ:  ಪಕ್ಷದ ಭವಿಷ್ಯದ ದೃಷ್ಟಿಯಿಂದ ಹೊಸ ನಾಯಕತ್ವ ಸೃಷ್ಟಿಯಾಗಬೇಕು, ಹಾಗಾಗಿ ಹೆಚ್ಚು ಯುವಕರಿಗೆ ಅವಕಾಶ ಕೊಡಬೇಕು ಎಂದು ಪಕ್ಷದ ವರಿಷ್ಠರು ಆಲೋಚನೆ ಮಾಡಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಕೇಂದ್ರದ ವರಿಷ್ಠರು ಈ ಬಾರಿ ಚುನಾವಣೆಯಲ್ಲಿ ಕೆಲವು ಹಿರಿಯರಿಗೆ ಅವಕಾಶ ಕೊಟ್ಟಿಲ್ಲ ಅಂದ್ರೆ ಅದರಲ್ಲಿ ಸದುದ್ದೇಶವಿದೆ ಎಂದು ಅವರು ಹೈಕಮಾಂಡ್‌ ತೀರ್ಮಾನವನ್ನು ಸಮರ್ಥಿಸಿದ್ದಾರೆ.

 

ಬಿಜೆಪಿ ದೊಡ್ಡ ಆಲದಮರಕ್ಕೆ ಹೋಲಿಸಿದ ವಿಜಯೇಂದ್ರ, ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದರು.

 

ಜಗದೀಶ ಶೆಟ್ಟರ್ ಅವರಿಗೆ ಅದರ ಪರಿಣಾಮ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಅವರು ಅಧಿಕಾರಕ್ಕೆ ಬರಲಿದ್ದಾರೆಂದು ಕಾಂಗ್ರೆಸ್‌ ನಾಯಕರು ಹಗಲು ಕನಸು ಕಾಣುತ್ತಿದ್ದಾರೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ವಿಜಯೇಂದ್ರ ಹೇಳಿದರು.

 

ಹೆಚ್ಚಿನ ಸುದ್ದಿ