Saturday, April 18, 2026
Homeಚುನಾವಣೆ 2023ಮತಪ್ರಚಾರಕ್ಕೆ ತೆರಳಿದ್ದ ಬಿವೈ ವಿಜಯೇಂದ್ರಗೆ ಪ್ರತಿಭಟನೆ ಬಿಸಿ.!

ಮತಪ್ರಚಾರಕ್ಕೆ ತೆರಳಿದ್ದ ಬಿವೈ ವಿಜಯೇಂದ್ರಗೆ ಪ್ರತಿಭಟನೆ ಬಿಸಿ.!

ಶಿವಮೊಗ್ಗ: ಬಿಎಸ್‌ವೈ ಕ್ಷೇತ್ರ ಶಿಕಾರಿಪುರದಲ್ಲಿ ಸ್ಪರ್ಧಿಸಲು ಹೊರಟಿರುವ ವಿಜಯೇಂದ್ರಗೆ ಪ್ರತಿಭಟನೆ ಬಿಸಿ ತಟ್ಟಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದ ತರಲಘಟ್ಟ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಬಿ ವೈ ವಿಜಯೇಂದ್ರ ವಿರುದ್ಧ ಬಂಜಾರ ಸಮುದಾಯ ಪ್ರತಿಭಟನೆ ನಡೆಸಿದೆ.

ಒಳಮೀಸಲಾತಿ ವಿಚಾರದಲ್ಲಿ ಈ ಹಿಂದೆ ಬಂಜಾರ ಸಮುದಾಯದವರು ಶಿವಮೊಗ್ಗದ ಬಿ ಎಸ್ ಯಡಿಯೂರಪ್ಪ ನಿವಾಸಕ್ಕೆ ನುಗ್ಗಲು ಪ್ರಯತ್ನಿಸಿ ಕಲ್ಲು ತೂರಾಟ ನಡೆಸಿದ್ದರು. ಆಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಶಾಂತಗೊಳಿಸಬೇಕಾಯಿತು. ಇದೀಗ ಮತ್ತೆ ಬಿಜೆಪಿ ಸರ್ಕಾರ ಇತ್ತೀಚೆಗೆ ತಂದಿರುವ ಒಳ ಮೀಸಲಾತಿ ನೀತಿ ವಿರೋಧಿಸಿ ಬಿಜೆಪಿ ಸರ್ಕಾರ ವಿರುದ್ಧ ಸಮುದಾಯದವರು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.

ಹೆಚ್ಚಿನ ಸುದ್ದಿ