ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಿಜೆಪಿ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಲ್ಲಾ ಆಯಾಮಗಳಲ್ಲೂ ಯೋಚಿಸಿ ಅಳೆದು ತೂಗಿ ಜಾತಿ ಲೆಕ್ಕಾಚಾರ ಮಾಡಿ ಟಿಕೆಟ್ ಘೋಷಿಸಿದೆ.
ಬಿಜೆಪಿ ಜಾತಿ ಲೆಕ್ಕಾಚಾರವನ್ನು ಗಣನೆಗೆ ತೆಗೆದುಕೊಂಡೆಯೇ ಟಿಕೆಟ್ ಘೋಷಣೆ ಮಾಡಿದೆ. ಲಿಂಗಾಯತ ಮತಬ್ಯಾಂಕ್ ಮೇಲೆ ಹಿಡಿತ ಸಾಧಿಸಿರುವ ಬಿಜೆಪಿ ಅದನ್ನೇ ಗೆಲುವಿನ ಅಸ್ತ್ರವಾಗಿ ಪ್ರಯೋಗಿಸಿದೆ. ಈ ಬಾರಿಯೂ ಲಿಂಗಾಯತ ನಾಯಕರಿಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಹಿಂದುಳಿದ ವರ್ಗ, ಎಸ್‌ಸಿ, ಎಸ್‌ಟಿ ಸಮುದಾಯಗಳ್ನೂ ಗಣನೆಗೆ ತೆಗೆದುಕೊಂಡು ಟಿಕೆಟ್ ಹಂಚಿಕೆ ಮಾಡಲಾಗಿದೆ.
ಬಿಜೆಪಿ ಜಾತಿ ಲೆಕ್ಕ
ಲಿಂಗಾಯತ- 51
ಒಕ್ಕಲಿಗ – 41
ವಾಲ್ಮೀಕಿ : 16
ಓಬಿಸಿ- 32
ಎಸ್‌ಸಿ- 30
ಎಸ್‌ಟಿ- 16
ಬ್ರಾಹ್ಮಣ : 10
ಕುರುಬ – 7
