Friday, June 19, 2026
Homeಚುನಾವಣೆ 2023ಟಿಕೆಟ್ ತಪ್ಪಲು ಸಿಎಂ ಬೊಮ್ಮಾಯಿ ಕಾರಣ: ಶಾಸಕ ಓಲೇಕಾರ್

ಟಿಕೆಟ್ ತಪ್ಪಲು ಸಿಎಂ ಬೊಮ್ಮಾಯಿ ಕಾರಣ: ಶಾಸಕ ಓಲೇಕಾರ್

ಹಾವೇರಿ: ಬಿಜೆಪಿ ಬುಧವಾರ ರಾತ್ರೋರಾತ್ರಿ ಬಿಡುಗಡೆ ಮಾಡಿದ 2ನೇ ಹಂತದ ಅಭ್ಯರ್ಥಿಗಳ ಪಟ್ಟಿಯಲ್ಲಿ ಟಿಕೆಟ್‌ ಕೈತಪ್ಪಿದ್ದಕ್ಕೆ ಕೋಪಗೊಂಡಿರುವ ಹಾಲಿ ಶಾಸಕ ನೆಹರೂ ಓಲೇಕಾರ್, ಟಿಕೆಟ್ ಕೈತಪ್ಪಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರಣ ಎಂದು ಹೇಳಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ 2ನೇ ಪಟ್ಟಿಯಲ್ಲಿ ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ನೆಹರೂ ಓಲೇಕಾರ್‌ಗೆ ಟಿಕೆಟ್ ಮಿಸ್ ಆಗಿದೆ. ಹಾವೇರಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನನಗೆ ಟಿಕೆಟ್ ಮಿಸ್ ಆಗಲು ಸಿಎಂ ಬೊಮ್ಮಾಯಿ ಹಾಗೂ ಜಿಲ್ಲಾಧ್ಯಕ್ಷ ಸಿದ್ದರಾಜ ಕಲ್ಲಕೋಟಿ ಕಾರಣ ಎಂದು ಅಸಮಾಧಾನ ಹೊರಹಾಕಿದ್ದಾರೆ. 

ಅವನ ಕ್ಷೇತ್ರದ ಚುನಾವಣೆ ಹೇಗೆ ಮಾಡುತ್ತಾನೆ ಎಂಬುದನ್ನ ನೋಡುತ್ತೇನೆ. ಜಿಲ್ಲೆಯಲ್ಲಿ ಎಷ್ಟು ಸೀಟು ಬಿಜೆಪಿ ಗೆಲ್ಲಿಸುತ್ತಾನೆ. ಯಡಿಯೂರಪ್ಪ ಹೆಸರಿನಲ್ಲಿ ಸಿಎಂ ಆದವನು. ಯಡಿಯೂರಪ್ಪನವರಿಗೆ ಮೋಸ ಮಾಡಿದ್ದಾನೆ ಎಂದು ಕಿಡಿಕಾರಿದ್ದಾರೆ. ರಾಷ್ಟ್ರೀಯ ನಾಯಕರಿಗೆ ಸ್ವಲ್ಪ ದಿನದಲ್ಲಿ ಗೊತ್ತಾಗುತ್ತೆ. ಉದ್ದೇಶಪೂರ್ವಕವಾಗಿ ಟಿಕೆಟ್‌ ತಪ್ಪಿnehaಸಿದ್ದಾರೆ. ರಾಜಕಾರಣದಲ್ಲಿ ನನ್ನ ಬೆಳವಣಿಗೆ ಸಹಿಸಲಾರದೆ ತಪ್ಪಿಸಿದ್ದಾರೆ.

ಮುಖ್ಯಮಂತ್ರಿ ಮಾಡಿದ ಹಗರಣವನ್ನ ಬಯಲಿಗೆ ಎಳೆಯುತ್ತೇನೆ.‌ ಆತ ಮಾಡಿದ ಘನಕಾರ್ಯವನ್ನ ಜನರ ಮುಂದೆ ಬಿಚ್ಚಿಡುತ್ತೇನೆ. ಸೂಕ್ತ ತನಿಖೆ‌ ಮಾಡಿಸುತ್ತೇನೆ. ಹಿಂದಿನ ಬಾರಿ ಸಹ ಟಿಕೆಟ್ ತಪ್ಪಿಸಲು ಓಡಾಡಿದ್ದರು. ಇದು ಸೇಡಿನ ರಾಜಕಾರಣಿ ಎಂದು ಟೀಕಿಸಿದ್ದಾರೆ.

ಹೆಚ್ಚಿನ ಸುದ್ದಿ