Wednesday, June 17, 2026
Homeದೇಶಬಿಬಿಸಿ ವಿರುದ್ಧ ಪ್ರಕರಣ ದಾಖಲಿಸಿದ ಈಡಿ: ಏನಿದು ಪ್ರಕರಣ?

ಬಿಬಿಸಿ ವಿರುದ್ಧ ಪ್ರಕರಣ ದಾಖಲಿಸಿದ ಈಡಿ: ಏನಿದು ಪ್ರಕರಣ?

ನವದೆಹಲಿ: ವಿದೇಶಿ ವಿನಿಮಯದ ನಿಯಮಗಳ ಉಲ್ಲ‌ಂಘನೆ ಆರೋಪದಲ್ಲಿ ಬಿಬಿಸಿ ವಿರುದ್ಧ ಜಾರಿ ನಿರ್ದೇಶನಾಲಯ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.

ಈ ಕಾಯ್ದೆಯು ವಿದೇಶದಿಂದ ಬರುವ ಹಣ, ಇಲ್ಲಿಂದ ಹೊರಹೋಗುವ ಹಣದ ಯಾವುದೇ ವಿದೇಶಿ ಸಂಸ್ಥೆಯ ಚಟುವಟಿಕೆಗಳ ನಿಯಮಗಳನ್ನು ರೂಪಿಸಿದೆ.

ಫೆಬ್ರವರಿಯಲ್ಲಿ ಬಿಬಿಸಿ ಕಚೇರಿಗೆ ದಾಳಿ ನಡೆಸಿದಾಗ
ಲೆಕ್ಕಪತ್ರ ಪುಸ್ತಕಗಳಲ್ಲಿ ಅಕ್ರಮಗಳು ಕಂಡು ಬಂದಿತ್ತು ಎಂದು ಈಡಿ ತಿಳಿಸಿತ್ತು.

ಇದೀಗ ಹಣಕಾಸು ವಹಿವಾಟಿನ ವಿವರಗಳು, ದಾಖಲೆಗಳು ಮತ್ತು ಲೆಕ್ಕಪತ್ರದ ವಿವರಗಳನ್ನು ನೀಡುವಂತೆ ಈಡಿ ಬಿಬಿಸಿಗೆ ಸೂಚಿಸಿದೆ.

2002ರ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ಬಗ್ಗೆ ಸಾಕ್ಷ್ಯಚಿತ್ರವೊಂದನ್ನು ಪ್ರಸಾರ ಮಾಡಿ ಬಿಬಿಸಿ ಭಾರೀ ಸುದ್ದಿಯಾಗಿತ್ತು.

ಹೆಚ್ಚಿನ ಸುದ್ದಿ