Saturday, June 20, 2026
Homeಚುನಾವಣೆ 2023ಬಿಜೆಪಿಗೆ ಜಗದೀಶ್‌ ಶೆಟ್ಟರ್ ರಾಜಿನಾಮೆ ವದಂತಿ

ಬಿಜೆಪಿಗೆ ಜಗದೀಶ್‌ ಶೆಟ್ಟರ್ ರಾಜಿನಾಮೆ ವದಂತಿ

ಹುಬ್ಬಳ್ಳಿ: ಟಿಕೆಟ್ ನಿರಾಕರಣೆ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜಿನಾಮೆ ಕೊಟ್ಟಿದ್ದಾರೆ ಎಂಬ ವದಂತಿ ಹರಿದಾಡ್ತಿದೆ. ಜಗದೀಶ್‌ ಶೆಟ್ಟರ್‌ಗೆ ಬಿಜೆಪಿಯಿಂದ ಟಿಕೆಟ್‌ ನೀಡಿಲ್ಲ ಎಂಬ ಹಿನ್ನೆಲೆಯಲ್ಲಿ ಶೆಟ್ಟರ್ ಹೆಸರಿರುವ ಲೆಟರ್‌ ಹೆಡ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರವರಿಗೆ ಬಿಜೆಪಿ ಪ್ರಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿ ಬರೆಯಲಾದ ಪತ್ರವೊಂದು ಹರಿದಾಡಿದೆ

ನಾನು ಪಕ್ಷ ಕಟ್ಟಿದ್ದೇನೆ.. ನನಗೆ ಟಿಕೆಟ್‌ ನೀಡುವಂತೆ ಕಳುತ್ತೇನೆ.. ಒಂದು ವೇಳೆ ಕೊಡದಿದ್ರೆ ನಾನು ಹುಬ್ಬಳ್ಳಿ ಸೆಂಟ್ರಲ್‌ನಿಂದ ಸ್ಪರ್ಧೆ ಮಾಡೋದು ಖಚಿತ ಎಂದು ಜಗದೀಶ್‌ ಶೆಟ್ಟರ್ ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಶೆಟ್ಟರ್ ರಾಜಿನಾಮೆ ಪತ್ರ ವೈರಲ್‌ ಆಗಿದ್ದು, ಖುದ್ದು ಜಗದೀಶ್ ಶೆಟ್ಟರ್ ಈ ಬಗ್ಗೆ ಸ್ಪಷ್ಟನೆ ನೀಡಿ ನಾನು ರಾಜಿನಾಮೆ ನೀಡಿಲ್ಲ ಎಂದಿದ್ದಾರೆ

ಹೆಚ್ಚಿನ ಸುದ್ದಿ