ಗುರುಗ್ರಾಮ್: ಗುರುಗ್ರಾಮ್‌ನಲ್ಲಿ ಮನೆಯ ಸಹಾಯಕಯೊಬ್ಬಳು ಸಾಕು ನಾಯಿಯನ್ನು ಮನಬಂದತೆ ಥಳಿಸುತ್ತಿರುವ ಸಿಸಿಟಿವಿ ವಿಡಿಯೋ ಎಲ್ಲೇಡೆ ಸಕತ್ ವೈರಲ್ ಆಗುತ್ತಿದೆ. ಮಹಿಳಾ ಸಹಾಯಕಿ ಲಿಫ್ಟ್ ಒಳಗೆ ಎಂಟ್ರಿ ಆಗುತ್ತಿದ್ದಂತೆ ನಾಯಿಗೆ ಕಟ್ಟಿದ ಹಗ್ಗದಿಂದ ಎತ್ತಿ ಹೊಡೆಯುತ್ತಿರುವುದು ಕಂಡುಬಂದಿದೆ. ಬಳಿಕ ಈ ಘಟನೆ ಮನೆಯ ಮಾಲೀಕರಿಗೆ ತಿಳಿದ ಬಳಿಕ ಮಹಿಳಾ ಸಹಾಯಕಯನ್ನ ಕೆಲಸದಿಂದ ತೆಗೆದುಹೊಕಿದ್ದಾರೆ.
ನಾಯಿಯನ್ನು ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ. ಪ್ರಾಣಿ ಕಲ್ಯಾಣ ಸಂಸ್ಥೆಯಾದ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ಸ್ವಯಂಸೇವಕರು ಪೊಲೀಸರಿಗೆ ದೂರನ್ನ ನೀಡಿದ್ದಾರೆ. ದೂರು ದಾಖಲಿಸಿಕೊಂಡ ಬಳಿಕ ಎರಡು ಸಾಕು ನಾಯಿಗಳನ್ನು ರಕ್ಷಿಸಲಾಗಿದೆ ಎಂದು ಗುರುಗ್ರಾಮ್ ಪೊಲೀಸರು ತಿಳಿಸಿದ್ದಾರೆ. ಹಾಗೆ, ದಿ ಪೆಟ್ಸ್ ಗಲ್ಲೋರ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ.
