Saturday, May 2, 2026
Homeಚುನಾವಣೆ 2023ಜೋಷಿ ಸಂಧಾನ ವಿಫಲ : ಸಂಜೆವರೆಗೂ ಕಾಯುತ್ತೇನೆ ಎಂದ ಜಗದೀಶ್ ಶೆಟ್ಟರ್

ಜೋಷಿ ಸಂಧಾನ ವಿಫಲ : ಸಂಜೆವರೆಗೂ ಕಾಯುತ್ತೇನೆ ಎಂದ ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಬಿಜೆಪಿ ಎರಡೂ ಪಟ್ಟಿಗಳಲ್ಲಿ ನನ್ನ ಹೆಸರು ಬಾರದ ಕಾರಣ ಇಂದು ಕಾರ್ಯಕರ್ತರೊಡನೆ ಸಭೆ ನಡೆಸಿ ಅವರೊಂದಿಗೆ ಚರ್ಚಿಸಿ ಬಳಿಕ ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಘೋಷಿಸಿದ್ದಾರೆ. ಶನಿವಾರ ತಮ್ಮ ನಿವಾಸದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಿಜೆಪಿ ನನಗೆ ಅಧಿಕಾರಿ, ಜವಾಬ್ದಾರಿ ಎಲ್ಲವನ್ನೂ ನೀಡಿದ್ದು, ಇದಕ್ಕಾಗಿ ನಾನು ಪಕ್ಷಕ್ಕೆ ಋಣಿಯಾಗಿದ್ದೇನೆ. ನಾನು ಹಳ್ಳಿಹಳ್ಳಿಯಲ್ಲಿ ಹೋಗಿ ಪಕ್ಷವನ್ನು ಕಟ್ಟಿ ನನಗೆ ನೀಡಿದ್ದ ಹೊಣೆಗಾರಿಕೆಯನ್ನು ನಿರ್ವಹಿಸಿದ್ದೇನೆ. ಆದರೆ ಈ ಬಾರಿ ಪಟ್ಟಿಯಲ್ಲಿ ನನ್ನನ್ನು ಕೈಬಿಟ್ಟಿರುವುದರಿಂದ ಕಾರ್ಯಕರ್ತರಲ್ಲಿ ಕಳವಳ ಪ್ರಾರಂಭವಾಗಿದೆ. ರಾಜ್ಯಾದ್ಯಂತ ಹಲವು ಜಿಲ್ಲೆಗಳಿಂದ ಅಭಿಮಾನಿಗಳು ಕರೆ ಮಾಡಿ ವಿಚಾರಿಸುತ್ತಿದ್ದಾರೆ. ನನಗೆ ಬೆಂಬಲ ನೀಡುವುದಾಗಿ ಹೇಳುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಮತ್ತೊಂದು ಬಾರಿ ಅವಕಾಶ ನೀಡಲು, ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡಿಕೊಂಡಿದ್ದೇನೆ. ಟಿಕೆಟ್ ಸಿಗುವ ಬಗ್ಗೆ ಭರವಸೆ ಅನುಮಾನ ಎರಡೂ ಇವೆ. ಹಾಗಾಗಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲು ಕಾರ್ಯಕರ್ತರ ಸಭೆ ಕರೆದಿದ್ದು, ಇವರು ನೀಡುವ ಅಭಿಪ್ರಾಯದ ಮೇಲೆ ತನ್ನ ನಿರ್ಣಯವನ್ನು ಪ್ರಕಟಿಸುವುದಾಗಿ ಶೆಟ್ಟರ್ ಹೇಳಿದ್ದಾರೆ.
ಶನಿವಾರ ಜಗದೀಶ್ ಶೆಟ್ಟರ್ ನಿವಾಸಕ್ಕೆ ತೆರಳಿದ್ದ ಪ್ರಲ್ಹಾದ್ ಜೋಷಿ ಮತ್ತು ಸಚಿವ ಮುನೇನಕೊಪ್ಪ ಅವರೊಡನೆ ಚರ್ಚೆ ನಡೆಸಿದ್ದರು.

ಹೆಚ್ಚಿನ ಸುದ್ದಿ