Tuesday, April 14, 2026
Homeಚುನಾವಣೆ 2023ಜಗದೀಶ್​ ಶೆಟ್ಟರ್ ಸೈದ್ಧಾಂತಿಕವಾಗಿ ಬಿಜೆಪಿ ಜೊತೆ ಇರಲಿಲ್ಲವೇ? ಸಿಟಿ ರವಿ ಪ್ರಶ್ನೆ

ಜಗದೀಶ್​ ಶೆಟ್ಟರ್ ಸೈದ್ಧಾಂತಿಕವಾಗಿ ಬಿಜೆಪಿ ಜೊತೆ ಇರಲಿಲ್ಲವೇ? ಸಿಟಿ ರವಿ ಪ್ರಶ್ನೆ

ಬೆಂಗಳೂರು: ಬಿಜೆಪಿ ಟಿಕೆಟ್‌ ವಂಚಿತ ಹಿರಿಯ ನಾಯಕ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಬಿಜೆಪಿಗೆ ರಾಜಿನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಟಿ ರವಿ, ಜಗದೀಶ್‌ ಶೆಟ್ಟರ್‌ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರಿದ್ದು ದುರದೃಷ್ಟಕರ ಎಂದು ಹೇಳಿದ್ದಾರೆ.

ಒಬ್ಬ ವ್ಯಕ್ತಿಗೆ ಒಂದು ಪಕ್ಷ ಏನಿಲ್ಲ ಸ್ಥಾನ ನೀಡಬಹುದು ಅದನ್ನೆಲ್ಲ ಶೆಟ್ಟರ್‌ಗೆ ಪಕ್ಷ ಕೊಟ್ಟಿದೆ. ಜಗದೀಶ್ ಶೆಟ್ಟರ್ ಪಕ್ಷ ತೊರೆದು ಯಾವ ಸಂದೇಶ ನೀಡಿದರು. ಹಾಗಿದ್ದರೆ, ಸೈದ್ಧಾಂತಿಕವಾಗಿ ಬಿಜೆಪಿ ಜೊತೆ ಶೆಟ್ಟರ್ ಇರಲಿಲ್ಲವಾ ?  ಎಂದು ಪ್ರಶ್ನಿಸಿದ್ದಾರೆ.

ವೈಯಕ್ತಿಕ ಲಾಭ ನಷ್ಟವನ್ನು ಹಾಕಿ‌ ನನಗೆ ಲಾಭ ಆದರೆ ಮಾತ್ರ ಬಿಜೆಪಿ. ಇನ್ನೊಬ್ಬರಿಗೆ ಲಾಭ ಆದ್ರೆ ಬಿಜೆಪಿ ಅಲ್ಲ ಎಂಬ ಮನಸ್ಥಿತಿ ಆಶ್ಚರ್ಯ ತರಿಸಿದೆ. ಜಗದೀಶ್ ಶೆಟ್ಟರ್ ಅವರಿಂದ ಇಂತಹದನ್ನ ನಿರೀಕ್ಷೆ ಮಾಡಿರಲಿಲ್ಲ ಎಂದು ಸಿಟಿ ರವಿ ಹೇಳಿದರು.

ತನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವುದರಿಂದ ನೊಂದು ಪಕ್ಷ ತೊರೆದಿದ್ದೇನೆ. ನನಗೆ ಅಧಿಕಾರ ಬೇಡ, ಹಿರಿಯ ನಾಯಕನಾಗಿರುವುದರಿಂದ ಗೌರವಯುತವಾಗಿ ರಾಜಕೀಯದಿಂದ ಕಳಿಸಿಕೊಡಬಹುದಿತ್ತು, ಅವಮಾನ ಮಾಡಿದ್ದಾರೆ, ಇದರಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಶೆಟ್ಟರ್‌ ಹೇಳಿದ್ದಾರೆ.

ಹೆಚ್ಚಿನ ಸುದ್ದಿ