Saturday, June 20, 2026
Homeಚುನಾವಣೆ 2023ಬಿಎಲ್ ಸಂತೋಷ್‌ ಮೇಲೆ ಉರಿದುಬಿದ್ದ ಜಗದೀಶ್‌ ಶೆಟ್ಟರ್

ಬಿಎಲ್ ಸಂತೋಷ್‌ ಮೇಲೆ ಉರಿದುಬಿದ್ದ ಜಗದೀಶ್‌ ಶೆಟ್ಟರ್

ಹುಬ್ಬಳ್ಳಿ: ನನಗೆ ಬಿಜೆಪಿ ಟಿಕೆಟ್‌ ಕೈತಪ್ಪಲು ಬಿ.ಎಲ್ ಸಂತೋಷ್‌ ನೇರ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಆರೋಪಿಸಿದ್ರು.

ಇಂದು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟರ್ ನಾನು ಹಲವು ದಿನಗಳಿಂದ ವೇದನೆ ಪಡುತ್ತಿದ್ದೇನೆ. ಹಲವು ನಾಯಕರ ಬಗ್ಗೆ ಮಾತನಾಡಬೇಕಿದೆ, ನಾನು ಈಗ ಮಾತನಾಡದಿದ್ದರೆ ಮುಂದೆ ಸಮಸ್ಯೆಯಾಗಲಿದೆ.

ನಾನು ಸಿ.ಎಂ ಆಗಿದ್ದಾಗ  ಒಳ್ಳೆಯ ಕೆಲಸ ಮಾಡಿದ್ದೇನೆ. ಬಿಜೆಪಿಯ ಕೆಲವು ನಾಯಕರಿಂದ ನೋವು ಅನುಭವಿಸಿದ್ದೇನೆ. ಅಂತವರ ಹೆಸರು ಬಹಿರಂಗಪಡಿಸುವ ಸಮಯ ಬಂದಿದೆ. ನನಗೆ ಬಿಜೆಪಿಯಲ್ಲಿ ಟಿಕೆಟ್ ತಪ್ಪಿಲು ಬಿಎಲ್‌ ಸಂತೋಷ್‌ ನೇರ ಕಾರಣ ಎಂದು ಆರೋಪ ಮಾಡಿದ್ರು.

ಅಧಿಕಾರದ ಲಾಲಸೆ ಎಂದು ಟೀಕೆ ಮಾಡುತ್ತಿದ್ದಾರೆ ಆದರೆ ನನಗೆ ಅಧಿಕಾರವೇ ಮುಖ್ಯ ಆಗಿದ್ದರೆ ಕಳೆದೆರಡು ವರ್ಷ ನಾನು ಯಾವುದೇ ಸ್ಥಾನ ಅಪೇಕ್ಷೆ ಮಾಡದೇ ಶಾಸಕಾನಿಯೇ ಇರಲಿಲ್ಲವೇ? ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲಾ. ಆದರೂ ನನಗೆ ಟಿಕೆಟ್‌ ನೀಡದೇ ಇದ್ದದ್ದು ಯಾವ ನ್ಯಾಯ ಎಂದು ಮತ್ತೆ ಪ್ರಶ್ನಿಸದ್ರು

ಹೆಚ್ಚಿನ ಸುದ್ದಿ