Saturday, April 25, 2026
Homeಚುನಾವಣೆ 2023ಜೆಡಿಎಸ್​ ನನ್ನ ನೈಜ ಎದುರಾಳಿ: ಬಿಜೆಪಿ ಶಾಸಕ ಪ್ರೀತಂಗೌಡ

ಜೆಡಿಎಸ್​ ನನ್ನ ನೈಜ ಎದುರಾಳಿ: ಬಿಜೆಪಿ ಶಾಸಕ ಪ್ರೀತಂಗೌಡ

ಹಾಸನ: ಕ್ಷೇತ್ರದಲ್ಲಿ ಬಿಜೆಪಿ ಒಂದು ಲಕ್ಷ ಮತ ಪಡೆಯುವುದು ನಿಶ್ಚಿತ. ಜೆಡಿಎಸ್​ ನನ್ನ ನೈಜ ಎದುರಾಳಿ ಎಂದು ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಹೇಳಿದ್ದಾರೆ.

ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಾಸನ ಲೂಟಿಯಾಗಿದೆ ಎಂಬ H​​.D.ರೇವಣ್ಣ ಹೇಳಿಕೆ ವಿಚಾರ ಕುರಿತು ಮಾತನಾಡಿದ ಪ್ರೀತಂಗೌಡ, ಹೌದು ನಾನು ಕ್ಷೇತ್ರದ ಜನರ ಪ್ರೀತಿಯನ್ನು ಲೂಟಿ ಮಾಡಿದ್ದೇನೆ. ಜನರ ಪ್ರೀತಿ ಲೂಟಿ ಮಾಡಿದ್ದಕ್ಕೆ ನಿನ್ನೆ ಅಷ್ಟೊಂದು ಜನ ಸೇರಿದ್ದು. ಸ್ವರೂಪ್​​ ಟಿಕೆಟ್​ ಪಡೆಯುವುದಕ್ಕೆ ಎಷ್ಟೊಂದು ಪರದಾಡಿದರು. ಇನ್ನು ಅವರು ಏನು ಕೆಲಸ ಮಾಡುತ್ತಾರೆ ಎಂದು ಜನ ಯೋಚನೆ ಮಾಡುತ್ತಾರೆ. ಒಂದು ಪತ್ರ ಕೊಡುವುದಕ್ಕೂ ಹೊಳೆನರಸೀಪುರದ ಅನುಮತಿ ಬೇಕು. ಹಾಗಾಗಿ ಹಾಸನದ ಜನರು ಕೆಲಸಗಾರನಿಗೆ ಅವಕಾಶ ಕೊಡುತ್ತಾರೆ ಎಂದು ರೇವಣ್ಣಗೆ ಟಾಂಗ್​ ನೀಡಿದ್ದಾರೆ.

ಅಲ್ಲದೇ, ನಿನ್ನೆ ಹಾಸನ ಜನರು ನನ್ನ ಎದುರಾಳಿಗಳಿಗೆ ಸಂದೇಶ ಕೊಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿಯಿಂದ ಕೂಡ ಅಭ್ಯರ್ಥಿ ಇರುತ್ತಾರೆ. ಆದರೆ ಜೆಡಿಎಸ್​ ನನ್ನ ನೈಜ ಎದುರಾಳಿ, ಉಳಿದ ಮೂರು ಪಕ್ಷಗಳು 2ನೇ ಸ್ಥಾನಕ್ಕೆ ಹೋರಾಟ ಮಾಡುತ್ತವೆ ಎಂದಿದ್ದಾರೆ.

ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟಿದ್ದೇವೆ ಎಂಬ ರೆವಣ್ಣ ದಂಪತಿಗೆ ಹೇಳಿಕೆಗೆ ತಿರುಗೇಟು ನೀಡಿರುವ ಪ್ರೀತಂಗೌಡ, ಸ್ವರೂಪ್ ಅವರ ತಂದೆ ನಗರಸಭೆ ಅಧ್ಯಕ್ಷರಾಗಿ, ಆರು ಬಾರಿ ಚುನಾವಣೆಯಲ್ಲಿ ಅಭ್ಯರ್ಥಿ ಆಗಿದ್ದರು, 40 ವರ್ಷ ಆಕ್ಟೀವ್ ರಾಜಕೀಯದಲ್ಲಿ ಇದ್ದವರು. ಎನ್ನುವ ಮೂಲಕ ದಳಪತಿಗಳ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಾನು ಮಾಡಿದ ಕೆಲಸ ಏನೆಂದು ನಿನ್ನೆ ಜನರು ಉತ್ತರ ಕೊಟ್ಟಿದಾರೆ. ನಾನು ಯಾರಿಗು ಸಂದೇಶ ಕೊಟ್ಟಿಲ್ಲ. ಜನರೇ ನನ್ನ ಎದುರಾಳಿಗಳಿಗೆ ಸಂದೇಶ ಕೊಟ್ಟಿದ್ದಾರೆ ಎಂದರು.

ಹೆಚ್ಚಿನ ಸುದ್ದಿ