Thursday, April 30, 2026
Homeಚುನಾವಣೆ 2023ಕಾಂಗ್ರೆಸ್ ಆಯ್ತು ಈಗ ಬಿಜೆಪಿ ಹಾಳು ಮಾಡುತ್ತಿದ್ದಾರೆ- ರಮೇಶ್‌ ಜಾರಕಿಹೊಳಿ ವಿರುದ್ಧ ಸವದಿ ಕಿಡಿ

ಕಾಂಗ್ರೆಸ್ ಆಯ್ತು ಈಗ ಬಿಜೆಪಿ ಹಾಳು ಮಾಡುತ್ತಿದ್ದಾರೆ- ರಮೇಶ್‌ ಜಾರಕಿಹೊಳಿ ವಿರುದ್ಧ ಸವದಿ ಕಿಡಿ

ಬೆಳಗಾವಿ: ರಮೇಶ್‌ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ ಮಾತಿನ ವಾರ್‌ ಜೋರಾಗ್ತಿದೆ. ಸವದಿ ಬಿಜೆಪಿ ತೊರೆದ ವಿಚಾರಕ್ಕೆ ಪ್ರತಿಕ್ರಿಯಿಸಿ ಪೀಡೆ ತೊಲಗಿತು ಎಂದಿದ್ದ ರಮೇಶ್‌ ಜಾರಕಿಹೊಳಿ ವಿರುದ್ಧ ಸವದಿ ಕಿಡಿ ಕಾರಿದ್ದಾರೆ

ನಾನು ೨೦ ವರ್ಷ ಬಿಜೆಪಿಗಾಗಿ ದುಡಿದಿದ್ದೆ. ಜಾರಕಿಹೊಳಿಯೆಂಬ ಮಹಾನುಭಾವನಿಂದ ನಾನು ಪಕ್ಷ ತೊರೆಯುವಂತಾಯ್ತು. ಆತ ಕಾಂಗ್ರೆಸ್‌ ಹಾಳುಮಾಡಿದ್ದ.. ಈಗ ಬಿಜೆಪಿಯನ್ನೂ ಹಾಳು ಮಾಡಲು ಹೊರಟಿದ್ದಾನೆ ಎಂದು ಹರಿಹಾಯ್ದರು

ಅಥಣಿಯಲ್ಲಿ ಮಹೇಶ್‌ ಕುಮಟಳ್ಳಿ ಗೆಲ್ಲಿಸುತ್ತೇನೆ ಎಂದಿರುವ ರಮೇಶ್‌ ಜಾರಕಿಹೊಳಿ ಮಾತನ್ನು ನಾನು ಸ್ವಾಗತಿಸುತ್ತೇನೆ.. ನಾನು ನನ್ನ ಮನೆಯನ್ನೇ ಅರ್ಧ ಖಾಲಿ ಮಾಡಿಸುತ್ತೇನೆ ಅವರು ಬೇಕಾದ್ರೆ ಅಲ್ಲೇ ಬಂದು ಇರಲಿ ಎಂದು ರಮೇಶ್‌ ಜಾರಕಿಹೊಳಿಯನ್ನಯ ಸವದಿ ಸ್ವಾಗತಿಸಿದ್ರು.

ಹೆಚ್ಚಿನ ಸುದ್ದಿ