Thursday, June 18, 2026
Homeರಾಜ್ಯನಾಳೆ ಮುದ್ದೇಬಿಹಾಳ ಸಂಪೂರ್ಣ‌ ಸ್ವಯಂ ಪ್ರೇರಿತ ಬಂದ್...!! ಅಪ್ಪಾಜಿ ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡಿ:...

ನಾಳೆ ಮುದ್ದೇಬಿಹಾಳ ಸಂಪೂರ್ಣ‌ ಸ್ವಯಂ ಪ್ರೇರಿತ ಬಂದ್…!! ಅಪ್ಪಾಜಿ ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡಿ: ಕ್ಷೇತ್ರದ ಜನರ ಆಗ್ರಹ…!!!

ಮುದ್ದೇಬಿಹಾಳ:
ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಮುದ್ದೇಬಿಹಾಳ ಕ್ಷೇತ್ರದ ಜನರು ಸ್ವಯಂ ಪ್ರೇರಿತವಾಗಿ ಶಾಂತಿಯುತ ಬಂದ್ ಮಾಡಿ ಕಾಂಗ್ರೇಸ್ ಹೈಕಮಾಂಡ್‌ಗೆ ಒತ್ತಾಯಿಸಲು ತೀರ್ಮಾಣಿಸಿಲಾಗಿದೆ ಎಂದು ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರುಣ್ಣ ತಾರನಾಳ ಹೇಳಿದರು.
ಗುರುವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಕ್ಷೇತ್ರದ ಎಲ್ಲ ವ್ಯಾಪಾರಸ್ಥರು, ಗಣ್ಯ ಉದ್ಯಮಿದಾರರು, ಸಂಘ ಸಂಸ್ಥೆಯವರು ನನ್ನನ್ನು ಸಂಪರ್ಕಿಸಿ ಮುದ್ದೇಬಿಹಾಳ ಸಂಪೂರ್ಣ ಬಂದ್ ಮಾಡುವ ಮೂಲಕ ನಮ್ಮ ಬೇಡಿಕೆಯನ್ನು ಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಹಾಗೂ ಹೈಕಮಾಂಡ್‌ಗೆ ತಿಳಿಸಿಕೊಡಬೇಕಿದೆ. ಆದ್ದರಿಂದ ನಾವೆಲ್ಲರೂ ಯಾವುದೇ ಯಾರದೇ ಬಲವಂತವಿಲ್ಲದೇ ನಮ್ಮ ವ್ಯಾಪಾರ ವಹಿವಾಟುಗಳನ್ನು ಒಂದು ದಿನದ ಮಟ್ಟಿಗೆ ಬಂದ್ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ ಎಂದು ಅವರು ಹೇಳಿದರು.


ಬನಶಂಕರಿ ದೇವಸ್ಥಾನದಿಂದ ಮೆರವಣಿಗೆ:
ಮುದ್ದೇಬಿಹಾಳ ಕ್ಷೇತ್ರದಿಂದ ಸುಮಾರು 5000 ಜನರು ಪಟ್ಟಣಕ್ಕೆ ಆಗಮಿಸುವ ಅಂಕಿಸAಖ್ಯೆ ಇದ್ದ ಕಾರಣ ಇಲ್ಲಿನ ಬನಶಂಕರಿ ದೇವಸ್ಥಾನದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ಮೂಲಕ ಆಗಮಸಿ ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿಎಂ ಡಿ.ಕೆ.ಶಿವಕುಮಾರ ಹಾಗೂ ರಾಜ್ಯಾಧ್ಯಕ್ಷ ಬಿ.ಕೆ.ಹರಿಪ್ರಸಾದ ಅವರಿಗೆ ಫ್ಯಾಕ್ಸ್ ಮೂಲಕ ಮನವಿಯನ್ನು ಕಳುಹಿಸಿ ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಬ್ಲಾಕ್ ಕಾಂಗ್ರೇಸ್ ತಾಲೂಕಾಧ್ಯಕ್ಷ ಗುರುಣ್ಣ ತಾರನಾಳ ಹೇಳಿದರು.
ಬಸ್ ಬಂದ್‌ಗೂ ಮನವಿ:
ಮುದ್ದೇಬಿಹಾಳ ಪಟ್ಟಣದಿಂದ ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಯಾವುದೇ ಬಸ್ ಸಂಚಾರ ನಡೆಸದೇ ಸ್ಥಗಿತಗೊಳಿಸಬೇಕು ಎಂದು ಸಾರಿಗೆ ಇಲಾಖೆಯ ವ್ಯವಸ್ಥಾಪಕರಿಗೆ ಮನವಿಯನ್ನು ಮಾಡಲಾಗುತ್ತದೆ. ಇದರಿಂದ ಕ್ಷೇತ್ರದ ಜನರು ನಾಡಗೌಡ ಅವರ ಪರವಾಗಿ ಇಟ್ಟಿರುವ ಗಟ್ಟಿ ನಿಲುವಿನ ಬಗ್ಗೆ ಸರಕಾರಕ್ಕೆ ಮುಟ್ಟಿದಂತಾಗುತ್ತದೆ ಎಂದು ಅವರು ಹೇಳಿದರು.
ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಿರಿ:
ಶುಕ್ರವಾರ ಬಂದ್ ಕರೆ ನೀಡಿದ ಹಿನ್ನೆಲೆ ತಾಲೂಕಿನ ಗ್ರಾಮೀಣ ಭಾಗದಿಂದ ಆಗಮಿಸುವ ಶಾಲಾ ಹಾಗೂ ಕಾಲೇಜು ಮಕ್ಕಳಿಗೆ, ಇನ್ನೂಳಿದ ಸರಕಾರಿ ಕಛೇರಿಗೆ ಆಗಮಿಸುವ ಜನರಿಗೆ ಯಾವುದೇ ತೊಂದರೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ನೋಡಿಕೊಳ್ಳಬೇಕಾಗಿದೆ. ಈ ಬಂದ್ ಕರೆ ಸ್ವಯಂ ಪ್ರೇರಿತವಾಗಿಯೇ ಹೊರತು ಯಾವುದೇ ಒತ್ತಾಯ ಇರುವುದಿಲ್ಲ ಎಂದು ಅವರು ಸ್ಪಷ್ಠಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಬಾಬುರಾಯ ದೇಸಾಯಿ(ಹಡಗಲಿ), ಮಾಜಿ ಪುರಸಭೆ ಅಧ್ಯಕ್ಷ ಮೆಹಬೂಬ ಗೊಳಸಂಗಿ, ಸದಸ್ಯರಾದ ಶಿವು ಶಿವಪೂರ, ರಫೀಕ ದ್ರಾಕ್ಷಿ, ಕಾಮರಾಜ ಬಿರಾದಾರ, ಎ.ಗಣೇಶ ಅನ್ನಗೋನಿ, ಅಮರೇಶ ಗೂಳಿ, ಸಿಕಂದರ ಜಾನ್ವೇಕರ, ಪಿಂಟು ಸಾಳಿಮನಿ, ಹನಮಂತ ಮೇಲಿನಮನಿ, ಹುಸೇನ ಮುಲ್ಲಾ, ರಾಜು ರಾಯಗೊಂಡ, ಸುರೇಶಗೌಡ ಪಾಟೀಲ ಇದ್ದರು.

ಹೆಚ್ಚಿನ ಸುದ್ದಿ