ಮುದ್ದೇಬಿಹಾಳ:
ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಏನಾಗಬೇಕು ಎನ್ನುವುದು ತುಳಿದು ಅದನ್ನು ಶಾಸಕ ನಾಡಗೌಡ ಅವರಿಂದ ಮಾಡಿಸಿಕೊಳ್ಳುವುದನ್ನು ಕ್ಷೇತ್ರದ ಎಲ್ಲ ಜನರೂ ತಿಳಿದುಕೊಳ್ಳಬೇಕು ಎಂದು ರಾಜ್ಯ ಸರಕಾರದ ಗ್ಯಾರೆಂಟಿ ಸಮಿತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಹೇಳಿದ್ದಾರೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದಾಗ ಪಕ್ಷ, ವ್ಯಕ್ತಿ ಅಂತಾ ಹೋರಾಡಿ. ನಮ್ಮ ಮುದ್ದೇಬಿಹಾಳ ಕ್ಷೇತ್ರದ ಪ್ರಥಮ ಪ್ರಜೆಯಾಗಿ ಈಗಾಗಲೇ ಅಪ್ಪಾಜಿ ಸಿ. ಎಸ್.ನಾಡಗೌಡ ಅವರು ಆಯ್ಕೆಯಾಗಿದ್ದು ಅವರಿಗೆ ಸರ್ವ ಬೆಂಬಲವನ್ನು ಸೂಚಿಸಬೇಕು ಎಂದು ಅವರು ಹೇಳಿದರು.
ಶಾಂತಿಯುತ ಬಂದ್ ಗೆ ಬೆಂಬಲಿಸಿ:
ನಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಗಾಗಿ ಶಾಸಕ ಅಪ್ಪಾಜಿ ನಾಡಗೌಡ ಅವರಿಗೆ ಸಚಿವ ಸ್ಥಾನ ಅತ್ಯವಶ್ಯಕವಾಗಿದೆ. ಮುದ್ದೇಬಿಹಾಳ ಜನತೆ ಶಾಸಕ ನಾಡಗೌಡ ಅವರಿಗೆ ಎಲ್ಲ ರೀತಿಯ ಬೆಂಬಲವನ್ನು ಸೂಚಿಸಿ ಅವರಿಂದ ನಮ್ಮ ಕ್ಷೇತ್ರಕ್ಕೆ ಆಗಬೇಕಾದ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಶುಕ್ರವಾರ ಜಾತ್ಯತೀತ ವಾಗಿ ಕರೆ ನೀಡಿರುವ ಮುದ್ದೇಬಿಹಾಳ ಬಂದ್ ಗೆ ಬೆಂಬಲಿಸಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
