Thursday, April 30, 2026
Homeಚುನಾವಣೆ 2023ಶಕ್ತಿ ಪ್ರದರ್ಶನಕ್ಕೆ ಸವದಿ ವೇದಿಕೆ ಸಜ್ಜು

ಶಕ್ತಿ ಪ್ರದರ್ಶನಕ್ಕೆ ಸವದಿ ವೇದಿಕೆ ಸಜ್ಜು

ಅಥಣಿ ಬಿಜೆಪಿ ಟಿಕೆಟ್‌ ಮಹೇಶ್‌ ಕುಮಠಳ್ಳಿ ಪಾಲಾಗುತ್ತಿದ್ದಂತೆ ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಪಕ್ಷ ತೊರೆಯುವ ಬಗ್ಗೆಯೂ ಚರ್ಚೆಗಳಾಗುತ್ತಿದೆ.

ಗುರುವಾರ ಲಕ್ಷ್ಮಣ್‌ ಸವದಿ ತಮ್ಮ ಬೆಂಬಲಿಗರ ಸಮಾವೇಶ ಆಯೋಜಿಸಿದ್ದು, ಸುಮಾರು 15 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಈ ಸಮಾವೇಶಕ್ಕೆ ಜಮಾಯಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

ಮಧ್ಯಾಹ್ನ 3 ಗಂಟೆಗೆ ವೀರಶೈವ ವಿದ್ಯಾಪೀಠದಲ್ಲಿ ಈ ಸಮಾವೇಶ ಆಯೋಜನೆ ಮಾಡಿದ್ದು, ಬಿಜೆಪಿ ನಾಯಕರಿಗೆ ಈ ಮೂಲಕ ತನ್ನ ಶಕ್ತಿ ಪ್ರದರ್ಶನಕ್ಕೆ ಸವದಿ ಸಜ್ಜಾಗಿದ್ದಾರೆ. ರಾಜಿನಾಮೆ ಅಥವಾ ಪಕ್ಷೇತರ ಸ್ಪರ್ಧೆ ಬಗ್ಗೆ ಈ ಸಮಾವೇಶದಲ್ಲೇ ಸವದಿ ಘೋಷಣೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಲಕ್ಷ್ಮಣ್‌ ಸವದಿ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಇನ್ನೂ ಗೊಂದಲವಿದ್ದು, ಡಿಕೆ ಶಿವಕುಮಾರ್‌ ಅಸಡ್ಡೆ ತೋರುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಮಾವೇಶದ ಮೂಲಕ ತನ್ನ ಶಕ್ತಿ ಪ್ರದರ್ಶನಕ್ಕೆ ಸವದಿ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಹೆಚ್ಚಿನ ಸುದ್ದಿ