Monday, April 20, 2026
Homeದೇಶವೈಯಕ್ತಿಕ ದ್ವೇಷ : ಅಪಹರಿಸಿ ಮೂಗು ಕತ್ತರಿಸಿದ ದುಷ್ಕರ್ಮಿಗಳು

ವೈಯಕ್ತಿಕ ದ್ವೇಷ : ಅಪಹರಿಸಿ ಮೂಗು ಕತ್ತರಿಸಿದ ದುಷ್ಕರ್ಮಿಗಳು

ವ್ಯಕ್ತಿಯೊಬ್ಬನ್ನನು ಅಪಹರಿಸಿ ಹೊತ್ತೊಯ್ದು ಆತನ ಮೇಲೆ ಹಲ್ಲೆಗೈದು ಮೂಗು ಕತ್ತರಿಸಿರುವ ಘಟನೆ ರಾಜಸ್ಥಾನದ ಅಜ್ಮೇರ್ ಜಿಲ್ಲೆಯಲ್ಲಿ ನಡೆದಿದೆ.
ಅಪಹರಣಕಾರರು ಹಲ್ಲೆಗೀಡಾದ ವ್ಯಕ್ತಿಯ ಪತ್ನಿಯ ಸಂಬಂಧಿಕರೇ ಆಗಿದ್ದು, ಇವರಿಬ್ಬರ ಮದುವೆಗೆ ಅವರ ವಿರೋಧಿವಿತ್ತು ಎನ್ನಲಾಗಿದೆ. ಈ ದ್ವೇಷವನ್ನು ತೀರಿಸಿಕೊಳ್ಳುವ ಸಲುವಾಗಿ ಈ ದುಷ್ಕøತ್ಯ ಎಸೆಗಿದ್ದಾರೆಂದು ತಿಳಿದುಬಂದಿದೆ.
ಹಲ್ಲೆಗೀಡಾದ ವ್ಯಕ್ತಿ ಸೋಮವಾರ ದೂರು ದಾಖಲಿಸಿರುವಂತೆ ಮಾ 18 ರಂದು ತನ್ನನ್ನು ಅಪಹರಿಸಿ ನಾಗೌಲಿ ಜಿಲ್ಲೆಯ ಹಳ್ಳಿಯೊಂದಕ್ಕೆ ಕರೆದೊಯ್ಯಲಾಯಿತು. ಅಲ್ಲಿ ತನ್ನ ಮೇಲೆ ಹಲ್ಲೆಯೆಸಗಿ ಮೂಗು ಕತ್ತರಿಸಲಾಯಿತು ಎಂದಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಈಗಾಗಲೇ ಬಂಧಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಅಜ್ಮೇರ್ ಪೊಲೀಸರು ತಿಳಿಸಿದ್ದಾರೆ.
ಬಹಳ ಹಿಂದೆಯೇ ಈ ವ್ಯಕ್ತಿ ಮದುವೆಯಾಗಿದ್ದ. ಆದರೆ ಈ ವಿವಾಹಕ್ಕೆ ಹೆಣ್ಣಿನ ಪೋಷಕರ ಸಮ್ಮತಿಯಿರಲಿಲ್ಲ. ಹೀಗಾಗಿ ಹೆಣ್ಣಿನ ಸೋದರರು ಹಾಗೂ ಮತ್ತಿತರ ಬಂಧುಗಳಿಂದ ಈ ಕೃತ್ಯ ನಡೆದಿದೆ ಎಂದು ವ್ಯಕ್ತಿ ಆರೋಪಿಸಿದ್ದಾನೆ.

ಹೆಚ್ಚಿನ ಸುದ್ದಿ