Wednesday, April 29, 2026
Homeಟಾಪ್ ನ್ಯೂಸ್ಅಧಿಕ ಬಾಡಿಗೆ ವಸೂಲಿ ಮಾಡ್ತಿದ್ದ ಆಟೋ ಚಾಲಕರಿಗೆ ಮಂಗಳೂರು ಪೊಲೀಸ್ ಶಾಕ್!

ಅಧಿಕ ಬಾಡಿಗೆ ವಸೂಲಿ ಮಾಡ್ತಿದ್ದ ಆಟೋ ಚಾಲಕರಿಗೆ ಮಂಗಳೂರು ಪೊಲೀಸ್ ಶಾಕ್!

ಮಂಗಳೂರು: ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡುತ್ತಿದ್ದ ಆಟೋ ಚಾಲಕರ ವಿರುದ್ಧ ಮಂಗಳೂರು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಹೆಚ್ಚುವರಿ ಶುಲ್ಕ ವಿಧಿಸುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಗಸ್ತಿಗೆ ಇಳಿದಿದ್ದು, ಪ್ರಯಾಣಿಕರ ಸೋಗಿನಲ್ಲಿ ಆಟೋ ಹತ್ತಿದ್ದಾರೆ. ಈ ವೇಳೆ ಹೆಚ್ಚುವರಿ ಬಾಡಿಗೆ ಕೇಳಿದ ಆಟೋ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದುವರೆಗೂ 16 ಚಾಲಕರ ಮೇಲೆ ಪ್ರಕರಣ ದಾಖಲಿಸಿದ್ದು, ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ