Saturday, June 20, 2026
Homeಚುನಾವಣೆ 2023ಮಹಿಳೆಯರಿಂದ ತರಾಟೆ : ಕಂಗಾಲಾದ ನಿಖಿಲ್ ಕುಮಾರಸ್ವಾಮಿ!

ಮಹಿಳೆಯರಿಂದ ತರಾಟೆ : ಕಂಗಾಲಾದ ನಿಖಿಲ್ ಕುಮಾರಸ್ವಾಮಿ!

ರಾಮನಗರ: ಒಂದು ಸರಿಯಾದ ರಸ್ತೆಯಿಲ್ಲ, ಕುಡಿಯೋಕೆ ನೀರಿಲ್ಲ,. ನಮ್ಮೂರಿಗೆ ನೀವು ಓಟು ಕೇಳೋದಿಕ್ಕೆ ಬರಬೇಡಿ! ಎಂದು ಹಳ್ಳಿ ಹೆಂಗಸರು ನಿಖಿಲ್ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ, ಹಾರೋಹಳ್ಳಿ ತಾಲೂಕಿನ ಬಾದಗೆರೆಯಲ್ಲಿ ನಡೆದಿದೆ. ಜೆಡಿಎಸ್ ಪ್ರಚಾರಕಾರ್ಯದಲ್ಲಿ ತೊಡಗಿದ್ದ ನಿಖಿಲ್ ಕುಮಾರಸ್ವಾಮಿ ಹಳ್ಳಿ ಹೆಂಗಸರ ರೌದ್ರಾವತಾರ ಕಂಡು ತಬ್ಬಿಬ್ಬಾಗಿದ್ದಾರೆ.
ನಿಮ್ಮ ಅಮ್ಮ (ಅನಿತಾ ಕುಮಾರಸ್ವಾಮಿ) ಮೂರು ಬಾರಿ ಬಂದು ಗುದ್ದಲಿ ಪೂಜೆ ಮಾಡಿ ಹೋಗಿದ್ದಾರೆ. ಆದರೆ ಇಂದಿನವರೆಗೂ ರಸ್ತೆ ಕಾಮಗಾರಿ ಪ್ರಾರಂಭವೇ ಆಗಿಲ್ಲ ಎಂದು ಹಳ್ಳಿ ಹೆಂಗಸರ ಅವಾಜ್‍ಗೆ ನಿಖಿಲ್ ಕುಮಾರಸ್ವಾಮಿ ನಿರುತ್ತರರಾಗಿದ್ದಾರೆ. ಬಳಿಕ ಸ್ಥಳೀಯರೇ ಆ ಮಹಿಳೆಯರನ್ನು ಸಮಾಧಾನಪಡಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಮನಗರದ ಹಾರೋಹಳ್ಳಿಯ ಬಾದಗೆರೆಯಲ್ಲಿ ಈಗಲೂ ಮೂಲಭೂತ ಸೌಲಭ್ಯಗಳಿಗೆ ಕೊರತೆಯಿದೆ. ಅಸಮರ್ಪಕ ರಸ್ತೆ, ಕುಡಿಯುವ ನೀರಿನ ತತ್ವಾರ ಈ ಗ್ರಾಮದ ಮುಖ್ಯ ಸಮಸ್ಯೆಗಳು. ಇವುಗಳನ್ನೇ ಮುಂದಿಟ್ಟುಕೊಂಡು ಗ್ರಾಮಸ್ಥರು ನಿಖಿಲ್ ಕುಮಾರಸ್ವಾಮಿ ಎದುರಿನಲ್ಲೇ ಮತದಾನ ಬಹಿಷ್ಕಾರದ ಬೆದರಿಕೆ ಒಡ್ಡಿದ್ದಾರೆ. ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಈಗ ನಿಖಿಲ್ ಕುಮಾರಸ್ವಾಮಿ ಜೆಡಿಎಸ್‍ನಿಂದ ಸ್ಪರ್ಧಿಸುತ್ತಿದ್ದಾರೆ.

ಹೆಚ್ಚಿನ ಸುದ್ದಿ